2023-24ನೇ ಸಾಲಿನ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಅಂತರ್ ವಿಭಾಗೀಯ ಹಂತದ ಕೋರಿಕೆ/ ಪರಸ್ಪರ ವರ್ಗಾವಣೆಯ ಗಣಕೀಕೃತ ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಅಂತರ ವಿಭಾಗೀಯ ಹಂತದ ವರ್ಗಾವಣಾ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಪಕಟಿಸಲಾಗಿತ್ತು. ಅದರಂತೆ ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ರೌಂಡ್ರಾಬಿನ್ ವಿಧಾನದಲ್ಲಿ ಈ ಕೆಳಕಂಡ ಪರಿಷ್ಕರಿಸಿದ ವೇಳಾಪಟ್ಟಿಯಂತೆ ಬೆಳಿಗ್ಗೆ 9-00 ರಿಂದ ಸಂಜೆ 7-00 ಗಂಟೆಯವರೆಗೆ ನಿರಂತರವಾಗಿ ನಡೆಯಲಿದ್ದು ಈಗಾಗಲೇ ಪ್ರಕಟಿಸಲಾಗಿರುವ ಆದ್ಯತಾ ಪಟ್ಟಿಯಲ್ಲಿರುವ ಶಿಕ್ಷಕರು ಪ್ರಸ್ತುತ ಕರ್ತವ್ಯ ನಿರತ ಜಿಲ್ಲೆಯ ಉಪನಿರ್ದೇಶಕರು(ಆಡಳಿತ] ಇವರ ಕಛೇರಿಯಲ್ಲಿ ನಿಗದಿತ ದಿನಾಂಕದಂದು ಪೂರಕ ಮೂಲ ದಾಖಲೆಗಳ ಸಹಿತ ಖುದ್ದಾಗಿ ಹಾಜರಿದ್ದು ಕೌನ್ಸಿಲಿಂಗ್ನಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಳ್ಳಲು ತಿಳಿಸಿದ ಹಾಗೂ ಆದ್ಯತೆ ಪಟ್ಟಿಯಲ್ಲಿನ ಪಿ.ಎಸ್.ಟಿ/ ಜಿ.ಪಿ.ಟಿ. ಶಿಕ್ಷಕರು ಸಕ್ಷಮ ಪ್ರಾಧಿಕಾರಿಗಳು ನೀಡಿರುವ ನೇಮಕಾತಿ ಆದೇಶದ ಪ್ರತಿ ತರುವುದು. ವರ್ಗಾವಣಾ ಕಾಯ್ದೆಯ ಸೆಕ್ಷನ್-10 ರಡಿಯಲ್ಲಿ ಆಧ್ಯತೆಯನ್ನು ಪಡೆಯುವ ಶಿಕ್ಷಕರು ಎಲ್ಲಾ ಮೂಲ ದಾಖಲೆಯನ್ನು ಪರಿಶೀಲನೆಗೆ ಒದಗಿಸಿ, ಒಂದು ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಕೌನ್ಸಿಲಿಂಗ್ ದಿನದಂದು ಉಪನಿರ್ದೇಶಕರಿಗೆ ಕಡ್ಡಾಯವಾಗಿ ಸಲ್ಲಿಸುವುದು.
ವರ್ಗಾವಣಾ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ತಮ್ಮ ವ್ಯಾಪ್ತಿಯ ಶಿಕ್ಷಕರ ಗಮನಕ್ಕೆ ತರಲು ವ್ಯಾಪಕ ಪ್ರಚಾರ ಕೈಗೊಳ್ಳಲು ಹಾಗೂ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲು ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ. ಕೌನ್ಸಿಲಿಂಗ್ ಜೇಷ್ಠತಾ ಪಟ್ಟಿ ಹಾಗೂ ಖಾಲಿ ಹುದ್ದೆಗಳ ಮಾಹಿತಿಯನ್ನು www.School education. in ನಲ್ಲಿ ಪ್ರಕಟಿಸಲಾಗಿದೆ.