ಐಸಿಎಸ್ಇ, ಐಎಸ್‌ಸಿ 2021ರ ಫಲಿತಾಂಶ ಪ್ರಕಟಣೆಗೆ ಮುಹೂರ್ತ ನಿಗದಿಯಾಗಿದೆ. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ , ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಫಲಿತಾಂಶ ಘೋಷಣೆಯ ದಿನಾಂಕ ಮತ್ತು ಸಮಯವನ್ನು ಬಿಡುಗಡೆ ಮಾಡಿದೆ.
ಜುಲೈ 24, 2021ರ ಇಂದು ಸಿಐಎಸ್ಸಿಇ 10 ಮತ್ತು 12 ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ. ಈ ವರ್ಷ ಐಸಿಎಸ್‌ಇ ಮತ್ತು ಐಎಸ್‌ಸಿ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಮಧ್ಯಾಹ್ನ 3 ಗಂಟೆಗೆ ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್ cisce.org ಗೆ ಭೇಟಿ ನೀಡಿ, ಫಲಿತಾಂಶ ಪಡೆಯಬಹುದು.
2021 ರ 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳ ಫಲಿತಾಂಶಗಳನ್ನು ಜುಲೈ 24 ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಸಿಐಎಸ್ಸಿಇ ಹೇಳಿದೆ. ಕೌನ್ಸಿಲ್ ಮಾನ್ಯತೆ ಪಡೆದ ಶಾಲೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಐಸಿಎಸ್ಇ ಮತ್ತು ಐಎಸ್ಸಿ ಫಲಿತಾಂಶಗಳು ಕೌನ್ಸಿಲ್ ವೆಬ್ಸೈಟ್ ಮತ್ತು ಎಸ್ಎಂಎಸ್ ಮೂಲಕ ಲಭ್ಯವಾಗುತ್ತವೆ.
ಕೊರೊನಾ ಹಿನ್ನಲೆಯಲ್ಲಿ ದೇಶಾದ್ಯಂತದ ರಾಷ್ಟ್ರೀಯ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳ ಜೊತೆ ಸಿಐಎಸ್ಸಿಇ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಆಂತರಿಕ ಮೌಲ್ಯಮಾಪನ ನೀತಿಯ ಆಧಾರದ ಮೇಲೆ ಮಂಡಳಿಯು ಐಸಿಎಸ್‌ಇ ಮತ್ತು ಐಎಸ್‌ಸಿ ಫಲಿತಾಂಶ 2021 ಅನ್ನು ಸಿದ್ಧಪಡಿಸಿದೆ.
9 ನೇ ತರಗತಿ ಮತ್ತು 10 ನೇ ತರಗತಿಯ ಆಂತರಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 10ನೇ ತರಗತಿ ಫಲಿತಾಂಶ ನೀಡಲಾಗ್ತಿದೆ. 11 ನೇ ತರಗತಿ ಮತ್ತು 12 ನೇ ತರಗತಿಯ ಆಂತರಿಕ ಪರೀಕ್ಷೆಗಳ ಆಧಾರದ ಮೇಲೆ 12ನೇ ತರಗತಿ ಅಂತಿಮ ಫಲಿತಾಂಶವನ್ನು ಸಿದ್ಧಪಡಿಸಲಾಗಿದೆ.