alex Certify BIG NEWS : ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..? ರಾಜ್ಯ ಸರ್ಕಾರದಿಂದ ‘ಸಲಹಾ ಕೈಪಿಡಿ’ ಬಿಡುಗಡೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..? ರಾಜ್ಯ ಸರ್ಕಾರದಿಂದ ‘ಸಲಹಾ ಕೈಪಿಡಿ’ ಬಿಡುಗಡೆ.!

ಬೆಂಗಳೂರು : ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..? ರಾಜ್ಯ ಸರ್ಕಾರ ಸಲಹಾ ಕೈಪಿಡಿ ಬಿಡುಗಡೆ ಮಾಡಿದೆ. ಗರಿಷ್ಠ ತಾಪಮಾನ, ಉಷ್ಣ ವಾತಾವರಣ, ಬಿಸಿಗಾಳಿ ಎಂದೆಲ್ಲಾ ಕರೆಸಿಕೊಳ್ಳುವ ಕಾಲ ಆರಂಭವಾಗಿದೆ. ಸಾಮಾನ್ಯ ಪ್ರದೇಶದಲ್ಲಿ ವಿಪರೀತ ಶಾಖದ ಮಟ್ಟವು ಹೆಚ್ಚಾಗಿ, ಸಾಮಾನ್ಯ ಉಷ್ಣಾಂಶವು ಗರಿಷ್ಠತೆಗೆ ತಲುಪಿ ತೇವಾಂಶ ಇಲ್ಲದಂತೆ ಮಾಡುವ ವಿಪರೀತ ಪರಿಸ್ಥಿತಿ ವಾತಾವರಣದಲ್ಲಿ ಉಂಟಾದಾಗ ಅದನ್ನು ಬಿಸಿಗಾಳಿ, ಉಷ್ಣಗಾಳಿ, ಬೇಸಿಗೆಯ ಝುಳ, ಉಷ್ಣವಾತಾವರಣ ಅಥವಾ ಸಾಮಾನ್ಯ ಭಾಷೆಯಲ್ಲಿ ಬೇಸಿಗೆ ಎಂದು ಕರೆಸಿಕೊಳ್ಳುತ್ತದೆ.

ಈ ಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲಾ ಜೀವ ಜಂತುಗಳಿಗೆ ಕಷ್ಟವಾಗುತ್ತದೆ. ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಬಿಸಿಲಿನ ಝಳವು ಸಾಕಷ್ಟು ಕಾಡುತ್ತದೆ.

ಬಿಸಿಲಿನ ತಾಪದಿಂದ ಮನುಷ್ಯರ ಮೇಲಾಗುವ ಪರಿಣಾಮಗಳು
ಈ ಲಕ್ಷಣಗಳನ್ನು ಗಮನಿಸಿ
ಶಾಖಾ ಸೆಳೆತ (ಹೀಟ್ ಕ್ರಾಂಪ್) ಜ್ವರ (102 ಡಿಗ್ರಿ ಗಿಂತ ಕಡಿಮೆ) ಹಾಗೂ ಮೈಯಲ್ಲಿ ಊತ ಕಾಣಿಸಿಕೊಳ್ಳುವುದು.
ಇವುಗಳನ್ನು ಮಾಡಿ
ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ ಹಾಗು ತಂಪಾದ ಜಾಗಗಳಿಗೆ ಹೋಗಿ.
ತಂಪಾದ, ಶುದ್ಧವಾದ ನೀರು ಕುಡಿಯುವುದು ಹಾಗೂ ಓ.ಆರ್.ಎಸ್ ಮತ್ತು ಗ್ಲಕೋಸ್ ಅನ್ನು ಬಳಸುವುದು.
ಹೃದ್ರೋಗ ಸಮಸ್ಯೆ ಇದ್ದರೆ ಅಥವಾ ಇತರೆ ಯಾವುದೇ ರೋಗ ಲಕ್ಷಣಗಳಿದ್ದರೆ ಸಕಾಲಕ್ಕೆ ವೈದ್ಯಕೀಯ ಸಹಾಯ ಪಡೆದುಕೊಳ್ಳಿ

ಈ ಲಕ್ಷಣಗಳನ್ನು ಗಮನಿಸಿ

ಶಾಖದ ಹೊಡೆತ (ಹೀಟ್ ಎನ್ಸಾಷನ್) ವಿಪರೀತ ಬೆವರುವಿಕೆ, ನಿಶ್ಯಕ್ತಿ, ಸುಸ್ತು, ತಲೆ ಸುತ್ತು, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯುಗಳ ಸೆಳೆತ.

ಇವುಗಳನ್ನು ಮಾಡಿ

ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ.
ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ.
ದೇಹದ ಉಷ್ಣಾಂಶವನ್ನು ನಿಯಂತ್ರಿಸಲು ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ.

ಈ ಲಕ್ಷಣಗಳನ್ನು ಗಮನಿಸಿ
ಶಾಖಾಘಾತ (ಹೀಟ್ ಸ್ಟೋಕ್)
ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗುವುದು(104 °F ಅಥವಾ ಅದಕ್ಕಿಂತ ಹೆಚ್ಚಾಗಿ), ಮನಸ್ಸಿನಲ್ಲಿ ಗೊಂದಲ, ಮೂರ್ಧೆ ರೋಗ ಹಾಗು ವ್ಯಕ್ತಿಯು ಕೋಮಾ ಸ್ಥಿತಿಗೆ ಹೋಗಬಹುದು.

* ಚರ್ಮ ಸುಡುವುದು ಅಥವಾ ಕೆಂಪಾದ ಚರ್ಮ
* ತಲೆ ನೋವು
* ವಾಕರಿಕೆ ಹಾಗು ವಾಂತಿ
* ಅತಿಯಾದ ನಾಡಿ ಮಿಡಿತ
* ಪ್ರಜ್ಞೆ ತಪ್ಪುವಿಕೆನಾಡಿಮಿಡಿತ.

ಇವುಗಳನ್ನು ಮಾಡಿ 
ತುರ್ತು ವೈದ್ಯಕೀಯ ಸಹಾಯವಾಣಿ 104 ಕ್ಕೆ ಕರೆ ಮಾಡಿ ವೈದ್ಯಕೀಯ ಸಹಾಯ ಪಡೆದುಕೊಳ್ಳಿ.
ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ.
ವ್ಯಕ್ತಿಯನ್ನು ಹೆಚ್ಚು ಗಾಳಿಯಾಡುವಂತಹ ತಂಪಾದ ಜಾಗಕ್ಕೆ ಸ್ಥಳಾಂತರಿಸಿ.
ವ್ಯಕ್ತಿಗೆ ಉಸಿರಾಟದ ಶ್ವಾಸನಾಳದ ತೊಂದರೆಗಳಿದ್ದು ಆತ ಅಶಕ್ತನಾದರೆ ತಕ್ಷಣ ಕುಡಿಯಲು ಏನನ್ನೂ ನೀಡಬಾರದು
ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ ದೇಹದ ಉಷ್ಣಾಂಶವನ್ನು ನಿಯಂತ್ರಿಸಿ. (ಮುಖ್ಯವಾಗಿ ತಲೆ, ಕತ್ತು, ಕಂಕುಳು, ಮತ್ತು ತೊಡೆಸಂದುಗಳಲ್ಲಿ)

ಹೇಗೆ ತಪ್ಪಿಸಬೇಕು:ಏನನ್ನು ತಿನ್ನಬೇಕು?

ಪ್ರಾಚೀನ ಭಾರತೀಯರ ನಂಬಿಕೆ ಪ್ರಕಾರ ನೀವು ತಿನ್ನುವ ಆಹಾರವು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ, ನೀವು ದೇಹದಲ್ಲಿ ನೀರಿನ ಅಂಶ ಉಳಿಸಿಕೊಳ್ಳುವಂತಹ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು.

ಅವುಗಳೆಂದರೆ:-
ತರಕಾರಿಗಳು- ಸ್ಥಳೀಯವಾಗಿ ಲಭ್ಯವಿರುವ ಹಸಿ ತರಕಾರಿಗಳಾದ ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡವಲಕಾಯಿ, ಕುಂಬಳಕಾಯಿ ಹಾಗು ಗೆಡ್ಡೆಗಳಾದ ಬೀಟ್ ರೂಟ್, ಕ್ಯಾರೆಟ್, ಮೂಲಂಗಿ ಮತ್ತು ಹಸಿರು ಸೊಪ್ಪುಗಳು ಇತ್ಯಾದಿಗಳನ್ನು ಬಳಸಬೇಕು.

* ಹಣ್ಣುಗಳು- ನೆಲ್ಲಿಕಾಯಿ/ಬೆಟ್ಟದ ನೆಲ್ಲಿಕಾಯಿ, ಬಾಳೆ ಹಣ್ಣು, ಕಲ್ಲಂಗಡಿ, ಮಾವು, ಮೂಸಂಬಿ, ಕಿತ್ತಳೆ ಹಣ್ಣು ಇತ್ಯಾದಿ.

*ರಾಗಿಹಿಟ್ಟು ಹಾಗೂ ಹೆಸರು ಬೇಳೆಗಳನ್ನು ಆಹಾರದಲ್ಲಿ ಬಳಸಿದರೆ ಉತ್ತಮ.
* ದೇಹವನ್ನು ತಂಪಾಗಿಸುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಶುಂಠಿ ಹಾಗೂ ಕರಿಬೇವಿನಂತಹ ಮೂಲಿಕೆಗಳನ್ನು ಮೊಸರಿನಲ್ಲಿ ಬೆರಸಿ ಮಾಡಲಾಗುವ ತಂಬುಳಿ, ಅಂಬಲಿ, ನೀರು ಪದಾರ್ಥಗಳು ಅಥವಾ ಸ್ಥಳೀಯ ದ್ರವ ಆಹಾರಗಳನ್ನು ಸೇವಿಸಬೇಕು.
* ಕನಿಷ್ಠ ಒಂದು ಹೊತ್ತಿನ ಊಟದಲ್ಲಾದರೂ ತುಪ್ಪವನ್ನು ಬಳಸುವುದು ಉತ್ತಮ.
* ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಖಾರದ ಮತ್ತು ಅಧಿಕ ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು.
* ಸಕ್ಕರೆಯ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ದೇಹವನ್ನು ತಂಪಾಗಿಡಲು ಸ್ಥಳೀಯವಾಗಿ ಸಿಗುವ ಯಾವ ತಿನಿಸುಗಳನ್ನು ನೀವು ತಯಾರಿಸುತ್ತೀರಿ ಮತ್ತು ನೀವು ಅದಕ್ಕೆ ಯಾವ ಅಂಶಗಳನ್ನು ಬಳಸುತ್ತೀರಿ?

ಕಾಲಕ್ಕೆ ತಕ್ಕಂತೆ, ಸುಲಭವಾಗಿ ಲಭ್ಯ ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಆಹಾರಗಳು ನಿಮಗೆ ಹೆಚ್ಚು ದುಬಾರಿಯಾಗಿದ್ದರೆ ಅಥವಾ ಆ ಸಮಯದ್ದಲಿ ದೊರಕದಿದ್ದರೆ, ಪರ್ಯಾಯವಾಗಿರುವ ಉತ್ತಮ ಆಹಾರಗಳನ್ನು ಬಳಸುವುದು ಸೂಕ್ತ.

ಏನೇನು ಕುಡಿಯಬಹುದು…?

* ದೇಹಕ್ಕೆ ದಾಹ ಎನಿಸದಿದ್ದಾಗಲೂ ಸಹ ನೀರಿನ ಬಳಕೆ ನಿರಂತರವಾಗಿರಲಿ. ಅದಕ್ಕೆ ಮಣ್ಣಿನ ಮಡಕೆಯಲ್ಲಿ ಶೇಖರಿಸಿದ ತಂಪಾದ ನೀರನ್ನು ಆಗಾಗ ಕುಡಿಯುತ್ತಿರಿ.
* ರಾತ್ರಿ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಕುಡಿಯಿರಿ. ದೇಹ ಇನ್ನಷ್ಟು ತಂಪಾಗಿರುವುದು.
ನಿಮಗೆ ತಿಳಿದಿರುವ ನೀರು ಶುದ್ದೀಕರಣ ಹಾಗು ಶೇಖರಣಾ ವಿಧಾನಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಿ.
* ತೀರಾ ತಂಪಾದ/ಕೊರೆಯುವ ನೀರನ್ನು ಕುಡಿಯಬೇಡಿ. ಅದರಿಂದ ಹೊಟ್ಟೆಯ ಸ್ನಾಯುಸೆಳೆತ ಹಾಗೂ ಅಜೀರ್ಣ ಉಂಟಾಗಬಹುದು.
* ಮದ್ಯ, ಚಹಾ, ಕಾಫಿ, ತಂಪಾದ ಪಾನೀಯಗಳು, ಸೋಡಾ ಹಾಗು ಇತರ ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಇರಬೇಕು. ಇದು ದೇಹದ ತಾಪವನ್ನು ಹೆಚ್ಚಿಸುತ್ತದೆ ಹಾಗು ನಿರ್ಜಲೀಕರಣ(ಡಿ ಹೈಡೇಶನ್) ಉಂಟುಮಾಡುವುದು.
* ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಹಣ್ಣಿನ ರಸದಂತಹ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿ.
* ಇತರ ಸ್ಥಳೀಯ ಪೇಯಗಳಾದ ಮನೆಯಲ್ಲೇ ಸಿದ್ದಪಡಿಸಿದ ಲಸ್ಸಿ, ತೋರಣಿ (ಅಕ್ಕಿ ಗಂಜಿ), ಉಶೀರಾ ರಸ ಬಳಸುವುದು ಸೂಕ್ತ.
* ಓ. ಆರ್. ಎಸ್. ಹಾಗು ಗ್ಲಕೋಸ್ ಮಿಶ್ರಿತ ನೀರನ್ನು ಹೊರಾಂಗಣದಲ್ಲಿದ್ದಾಗ ಹೆಚ್ಚಾಗಿ ಸೇವಿಸಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...