ಬೆಂಗಳೂರು : ವರ್ಗಾವಣೆ ನಿರೀಕ್ಷೆಯಲ್ಲಿರುವ ರಾಜ್ಯದ ಶಿಕ್ಷಕರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಉಲ್ಲೇಖಿತ ಪತ್ರದಲ್ಲಿ, 2016 ರಿಂದ 2023-24ನೇ ಸಾಲಿನ ವರೆಗೆ ಆಯ್ಕೆಯಾದ ವದವೀಧರ ಪ್ರಾಥಮಿಕ (6-8) ಶಿಕ್ಷಕರ ನೇಮಕಾತಿ ಆದೇಶದಲ್ಲಿ ವರ್ಗಾವಣೆಯಾಗಲು ವಿಧಿಸಿರುವ ನಿಬಂಧನೆಗಳು ಏಕರೂಪವಾಗಿಲ್ಲದ ಪ್ರಯುಕ್ತ ಶಿಕ್ಷಕರ ವರ್ಗಾವಣೆ ಸಂಬಂಧ ಹೊರಡಿಸಿರುವ ಮಾರ್ಗಸೂಚಿ ನಿಯಮಗಳನ್ನಯ ಸೇವೆಯಲ್ಲಿ ಕಿರಿಯ ಶಿಕ್ಷಕರು ವರ್ಗಾವಣೆಯಾಗಲಿದ್ದು ಹಿರಿಯ ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗುವ ಸಂಭವವಿದ್ದು, ವರ್ಗಾವಣಾ ಮಾರ್ಗಸೂಚಿಯನ್ವಯ ಪುನರ್ ಪರಿಶೀಲಿಸಿ ಹಿಂಪಡೆದು, ವರ್ಗಾವಣಾ ಕಾಯ್ದೆಯ ನಿಯಮಗಳನ್ನಯ ವರ್ಗಾವಣೆ ಪ್ರಕ್ರಿಯೆ ಜರುಗಿಸುವಂತೆ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು ಇವರು ಸರ್ಕಾರವನ್ನು ಕೋರಿರುತ್ತಾರೆ (ಪ್ರತಿ ಲಗತ್ತಿಸಿದೆ).
ಆದ್ದರಿಂದ, ಮೇಲ್ಕಂಡ ವಿಷಯದ ಬಗೆ, ನಿಯಮಾನುಸಾರ ವರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ, ಅರ್ಜಿದಾರರಿಗೆ ಸೂಕ್ತ ಮಾಹಿತಿ / ಹಿಂಬರಹ ನೀಡುವಂತೆ ಹಾಗೂ ಅಗತ್ಯವಿದ್ದಲ್ಲಿ ಮನವಿಯೊಂದಿಗೆ ಸರ್ಕಾರಕ್ಕೆ ಪ್ರತ್ಯೇಕವಾಗಿ ಪ್ರಸ್ತಾವನೆ/ ವರದಿಯನ್ನು ಸಲ್ಲಿಸುವಂತೆ ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.