ಬೆಂಗಳೂರು : ಆರೋಗ್ಯ ಇಲಾಖೆ ಸಿಬ್ಬಂದಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
2024-25ನೇ ಸಾಲಿನ ವರ್ಗಾವಣೆಯನ್ನು ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ 2011 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಕಾಯ್ದೆಯಡಿ ಹಾಗೂ ಈ ಕಾಯ್ದೆಯಡಿ ರಚಿಸಲಾಗಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಡಿಸಿ ದಿನಾಂಕ:31.07.2024ರ ಒಳಗಾಗಿ ಪೂರ್ಣಗೊಳಿಸಲು ಸರ್ಕಾರ ಸಹಮತಿ ನೀಡಲಾಗಿದೆ.
2024-25ನೇ ಸಾಲಿನ ಸಾರ್ವಜನಿಕ ವರ್ಗಾವಣೆ ಪ್ರಕ್ರಿಯೆಯನ್ನು ಸಮಾಲೋಚನೆ ಮೂಲಕ ವರ್ಗಾವಣೆ ಕಾಯ್ದೆ ಮತ್ತು ನಿಯಮ-2011 ಹಾಗೂ ತಿದ್ದುಪಡಿ ನಿಯಮಗಳನ್ವಯ ಕೈಗೊಳ್ಳಲು ಅಗತ್ಯ ಮಾಹಿತಿ ಕ್ರೋಡೀಕರಿಸುವ ಹಾಗೂ ಪರಿಶೀಲನಾ ಕಾರ್ಯ ಕೈಗೊಳ್ಳಲು ವರ್ಗಾವಣಾ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವರ್ಗಾವಣೆ ಅರ್ಜಿಗಳನ್ನು ಸಲ್ಲಿಸುವ ವಿಧಾನ
1. ವರ್ಗಾವಣೆ ಕಾಯ್ದೆ ಮತ್ತು ನಿಯಮಗಳನ್ವಯ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ವರ್ಗಾವಣೆ ಅರ್ಜಿಗಳನ್ನು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಕಛೇರಿ ಮುಖ್ಯಸ್ಥರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು/ನೌಕರರು ತಮ್ಮ ನಿಯಂತ್ರಣಾಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸುವುದು.
2. ವೈದ್ಯಾಧಿಕಾರಿಗಳು/ತಜ್ಞ ವೈದ್ಯರು ಮತ್ತು ಇತರೆ ಸಿಬ್ಬಂದಿಗಳ ವರ್ಗಾವಣೆ ಅರ್ಜಿಗಳ ಮಾಹಿತಿಯನ್ನು ಪತ್ರದೊಂದಿಗೆ ಲಗತ್ತಿಸಿರುವ ವರ್ಗಾವಣೆ ನಮೂನೆಯ ಅರ್ಜಿಯಲ್ಲಿ ಭರ್ತಿ ಮಾಡುವುದು. ಸದರಿ ವರ್ಗಾವಣೆ ಅರ್ಜಿಯ ಮಾಹಿತಿಯನ್ನು ಅಧಿಕಾರಿ/ನೌಕರರ ಸೇವಾ ವಿವರ ಹಾಗೂ ಮೂಲ ಸೇವಾ ಪುಸ್ತಕಗಳನ್ನು ಪರಿಶೀಲಿಸಿದ ನಂತರ ಭರ್ತಿ ಮಾಡಿದ ಸೇವಾ ವಿವರಗಳನ್ನು ಕಛೇರಿ ಮುಖ್ಯಸ್ಥರು ದಾಖಲೆಗಳೊಂದಿಗೆ ಪರಿಶೀಲಿಸಿ ಸಂಬಂಧಪಟ್ಟ ಆರೋಗ್ಯ ನಿಯಂತ್ರಣಾಧಿಕಾರಿ/ಮೇಲಾಧಿಕಾರಿಗಳ ಸಹಿಯೊಂದಿಗೆ ದೃಢೀಕರಿಸುವುದು. ಸಂಸ್ಥೆ/ಕಛೇರಿಯ
3. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯ ವಿಷಯ ನಿರ್ವಾಹಕರು, ಕಛೇರಿ ಅಧೀಕ್ಷಕರು, ಸಹಾಯಕ ಆಡಳಿತಾಧಿಕಾರಿಗಳು ಅರ್ಜಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮೇಲು ರುಜು ಮಾಡಿ ವರ್ಗಾವಣೆ ಅರ್ಜಿಯನ್ನು ಕ್ರೋಡಿಕರಿಸತಕ್ಕದ್ದು
4. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ರೋಡೀಕರಿಸಿಕೊಂಡ ಅರ್ಜಿಗಳಲ್ಲಿರುವ ಮಾಹಿತಿಯನ್ನು ಈ ಸುತ್ತೋಲೆಯಲ್ಲಿ ಲಗತ್ತಿಸಿರುವ ಎಕ್ಸೆಲ್ಶೀಟ್ ನಮೂನೆಯಲ್ಲಿ ಹುದ್ದೆವಾರು ಪ್ರತ್ಯೇಕವಾಗಿ ಭರ್ತಿ ಮಾಡಿ ಅದರಲ್ಲಿ ಅಧಿಕಾರಿ/ನೌಕರ ಸೇವಾ ಅವಧಿಯಲ್ಲಿನ ಸೇವೆಯನ್ನು ವಲಯವಾರು (A,B & C ZONE) ವಿಂಗಡಿಸಿ ಒಂದು ವರ್ಷ ಪೂರ್ಣಗೊಳಿಸಿದ ಅವಧಿಗೆ ಮಾತ್ರ ಅಂಕಗಳನ್ನು ನೀಡಿ ಸಾಫ್ಟ್ ಕಾಪಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು ಮತ್ತು ಅಂತಹ ಮಾಹಿತಿಯ ನಮೂನೆಯ ಹಾರ್ಡ್ ಕಾಪಿಯನ್ನು ಮೇಲಾಧಿಕಾರಿಗಳು ಸಹಿ ಮಾಡಿ. ಸ್ವೀಕೃತಗೊಂಡ ಎಲ್ಲಾ ಹುದ್ದೆವಾರು ವರ್ಗಾವಣೆ ಅರ್ಜಿಗಳ ಮೂಲ ಪ್ರತಿಯೊಂದಿಗೆ ನಿರ್ದೇಶನಾಲಯದ ಸಂಬಂಧಪಟ್ಟ ವೃಂದದ ವಿಷಯ ನಿರ್ವಾಹಕರು ಮತ್ತು ಕಛೇರಿ ಅಧೀಕ್ಷಕರುಗಳಿಗೆ ನೀಡಬೇಕಾಗಿರುವುದರಿಂದ ಪ್ರತಿ ಹುದ್ದೆವಾರು ಮಾಹಿತಿಗೆ ಪ್ರತ್ಯೇಕವಾಗಿ Covering letter ನೊಂದಿಗೆ ನಮೂನೆ -1, 2 ಮತ್ತು 3ರಲ್ಲಿ ನಿಗದಿಪಡಿಸಿರುವ ದಿನಾಂಕದೊಳಗೆ ಮುದ್ದಾಂ ಸಲ್ಲಿಸತಕ್ಕದ್ದು.