alex Certify BIG NEWS : ರಾಜ್ಯದ ಎಲ್ಲಾ ರಕ್ತ ಶೇಖರಣಾ ಘಟಕಗಳಲ್ಲಿ ‘FFP’ ಉಪಕರಣಗಳ ಖರೀದಿಗೆ ಸರ್ಕಾರ ಅನುಮೋದನೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ಎಲ್ಲಾ ರಕ್ತ ಶೇಖರಣಾ ಘಟಕಗಳಲ್ಲಿ ‘FFP’ ಉಪಕರಣಗಳ ಖರೀದಿಗೆ ಸರ್ಕಾರ ಅನುಮೋದನೆ.!

ಬೆಂಗಳೂರು : ರಾಜ್ಯದ ಎಲ್ಲಾ ತಾಲೂಕುಗಳ ರಕ್ತ ಶೇಖರಣಾ ಘಟಕಗಳಲ್ಲಿFFP ಉಪಕರಣಗಳ ಖರೀದಿ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ರಾಜ್ಯಾದ್ಯಂತ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಒಳಗೊಂಡಂತೆ First Referral Unitಗಳಲ್ಲಿ ರಕ್ತ ಶೇಖರಣಾ ಘಟಕೆಗಳು ಲಭ್ಯವಿಲ್ಲದ 50 ಆಸ್ಪತ್ರೆಗಳಲ್ಲಿ ರಕ್ತ ಶೇಖರಣಾ ಘಟಕಗಳ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೇಲೆ ಓದಲಾದ ಕ್ರಮಾಂಕ (2) ರ ಏಕ-ಕಡತದಲ್ಲಿ ವಾರ್ಷಿಕವಾಗಿ ಸುಮಾರು 518 ತಾಯಿಂದಿರು ಮರಣ ಹೊಂದುತ್ತಿದ್ದು, ಶೇಖಡ 20 ಪ್ರತಿಶತ ಮಹಿಳೆಯರು ಪ್ರಸೂತಿ ರಕ್ತಸ್ರಾವದಿಂದ ಮರಣ ಹೊಂದುತ್ತಿದಾರೆ. ಪ್ರಸೂತಿಯಿಂದ ಆಗುವ ಮರಣಗಳನ್ನು ಕಡಿಮೆ ಮಾಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಹಲವಾರು ಹಂತಗಳಲ್ಲಿ ಕ್ರಮ ಕೈಗೊಳಲಾಗಿದೆ. ಈ ಪ್ರಯತ್ನಗಳ ಹೊರತಾಗಿಯು ರಕ್ತ ಸಂಗ್ರಹಣೆ ಮತ್ತು ಲಭತೆಯು ಪ್ರಸೂತಿ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾರತ ದೇಶದಲ್ಲಿ ರಕ್ತ ಹೀನತೆಯು ಹೆಚ್ಚಾಗಿದ್ದು ಅದರಲ್ಲೂ ಮಹಿಳೆಯರಿಗೆ ಪ್ರಸೂತಿ ಸಮಯದಲ್ಲಿ ರಕ್ತಸ್ರಾವವು ಹೆಚ್ಚಾಗಿರುತ್ತದೆ ಹಾಗೂ ರಸ್ತೆ ಅಪಘಾತಗಳು ಮತ್ತು ಇತರೆ ಅಪಘಾತಗಳ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ರಕ್ತವನ್ನು ನೀಡಿದಲ್ಲಿ ಸಾವಿನ ಅಂಚಿನಿಂದ ತಡೆಯಬಹುದಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಗರ್ಭಿಣಿ ಸ್ತ್ರೀಯರು 147 ತಾಲ್ಲೂಕು ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿರುತ್ತಾರೆ. ಸದರಿ ಗರ್ಭಿಣಿ ಸ್ತ್ರೀಯರ ಪ್ರಸೂತಿ ಸಮಯದಲ್ಲಿ ಉಂಟಾಗುವ ರಕ್ತಸ್ರಾವ ತ ತಡೆಗಟ್ಟಲು. ರಕ್ತ ಶೇಖರಣ ಘಟಕಗಳಲ್ಲಿ Cryoprecipitate/ Fresh Frozen Plasma (FFP) ಮರಣ ಪ್ರಮಾಣಗಳನ್ನು ಶೇಖಡವಾರು ತಡೆಯಬಹುದಾಗಿರುತ್ತದೆ.

ಈ ಹಿನ್ನಲೆಯಲ್ಲಿ, ರಾಜ್ಯದ ಎಲ್ಲಾ ತಾಲ್ಲೂಕುಗಳ (147 taluks) ರಕ್ತ ಶೇಖರಣ ಘಟಕಗಳಲ್ಲಿ Cryoprecipitate/ Fresh Frozen” Plasma (FFP) ಉಪಕರಣಗಳನ್ನು ಕೆ.ಎಸ್.ಎಮ್.ಎಸ್.ಸಿ.ಎಲ್ ಸಂಸ್ಥೆಯಲ್ಲಿ ಉಳಿತಾಯವಾಗುವ ಅನುದಾನದಲ್ಲಿ ಭರಿಸಿ ಖರೀದಿಸಲು ಅನುಮೋದನೆ ನೀಡುವಂತೆ ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು. ಈ ಕೆಳಕಂಡಂತೆ ಆದೇಶಿಸಿದೆ.ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪ್ರಸೂತಿ ಸಮಯದಲ್ಲಾಗುವ ಮರಣ ಪ ಪ್ರಮಾಣವನ್ನು ಕಡಿಮೆ ಮಾಡಲು ತಾಲೂಕುಗಳ Cryoprecipitate/Fresh Frozen Plasma (FFP) ದಾಸ್ತಾನು ಇರಿಸಲು ಅಗತ್ಯವಿರುವ ಈ ಕೆಳಕಂಡ ಉಪಕರಣಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...