alex Certify BIG NEWS : 2024-25 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : 2024-25 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ.!

ಬೆಂಗಳೂರು : 2024-25 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ವೇಟೆಡ್ ಅಂಕಗಳನ್ನು (Weighted score) ತಂತ್ರಾಂಶದಲ್ಲಿ ಪ್ರಕಟಿಸಿರುವ ಬಗ್ಗೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಉಲ್ಲೇಖಗಳನ್ನಯ, 2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ದತ್ತಾಂಶಗಳ ಇಂದೀಕರಣ, ಶಿಕ್ಷಕರ ವೇಟೆಡ್ ಅಂಕಗಳ ಪ್ರಕಟಣೆ, ಆಕ್ಷೇಪಣೆ ಸ್ವೀಕಾರ, ಸದರಿ ಆಕ್ಷೇಪಣೆಗಳನ್ನು ಡಿ.ಡಿ.ಒ ರವರು ದಾಖಲೆಗಳೊಂದಿಗೆ ಪರಿಶೀಲನೆ ಮತ್ತು ಸರಿಯಾದ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂದೀಕರಣ ಮಾಡಬೇಕಾಗಿರುತ್ತದೆ. ತದನಂತರ ದತ್ತಾಂಶಗಳನ್ನು ಸ್ಥಿರೀಕರಿಸಿ ಮುಂದಿನ ಚಟುವಟಿಕೆಗಳಾದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಒಳಬರುವವರಿಗೆ ಆಯ್ಕೆ ಪ್ರಕ್ರಿಯೆ, ಹುದ್ದೆಗಳ ಸರ್ಮಪಕ ಮರುಹಂಚಿಕೆ(Rationalisation), ತದನಂತರ ಸಾಮಾನ್ಯ ವರ್ಗಾವಣೆಗೆ ವೇಳಾಪಟ್ಟಿ ಬಿಡುಗಡೆ ಮಾಡಬೇಕಾಗಿದೆ.
ಇದರ ಭಾಗವಾಗಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2020ರ ನಿಯಮ 4ರಂತೆ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ / ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರುಗಳ, ಡಿಸೆಂಬರ್ ತಿಂಗಳವರೆಗೂ ನವೀಕರಿಸಿದ ಶಿಕ್ಷಕರ ಸೇವಾ ವಿವರದ ಆಧಾರದ ಮೇಲೆ ಗಣನೆಗೆ ತೆಗೆದುಕೊಂಡು ಕರಡು ವೇಟೆಡ್ ಅಂಕಗಳನ್ನು ಪ್ರಕಟಿಸಬೇಕಾಗಿರುತ್ತದೆ. ಅದರಂತೆ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ಕರಡು ಸೇವಾ ಅಂಕಗಳನ್ನು (weighted score) ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್, ಶಿಕ್ಷಕರ ವರ್ಗಾವಣಾ ತಂತ್ರಾಂಶದ BEO ರವರ ಲಾಗಿನ್ ಹಾಗೂ ಇಲಾಖಾ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಪ್ರಕಟಿತ ಸೇವಾ ಅಂಕಗಳನ್ನು (weighted score), ಪರಿಶೀಲಿಸಿಕೊಳ್ಳಲು ಎಲ್ಲಾ ಶಿಕ್ಷಕರುಗಳಿಗೆ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿ.ಡಿ.ಒ ರವರು ಮಾಹಿತಿ ನೀಡುವುದು. ಎಲ್ಲಾ ಶಿಕ್ಷಕರು ತಮ್ಮ ಸೇವಾ ಅಂಕಗಳನ್ನು ಪರಿಶೀಲಿಸಿಕೊಂಡು ಯಾವುದೇ ವ್ಯತ್ಯಾಸಗಳು ಇದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ / ವೇತನ ಬಟವಾಡೆ ಮಾಡುವ ಅಧಿಕಾರಿಗಳಿಗೆ (DDO) ಸೇವಾ ಅಂಕಗಳನ್ನು ಸರಿಪಡಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ತಿಳಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು / ವೇತನ ಬಟವಾಡೆ ಮಾಡುವ ಅಧಿಕಾರಿಗಳು (DDO) ಶಿಕ್ಷಕರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡುವುದು ಮತ್ತು ಶಿಕ್ಷಕರು ಸಲ್ಲಿಸಿದ ದಾಖಲೆಗಳನ್ನು ಹಾಗೂ ತಿದ್ದುಪಡಿ ಮಾಡಿ ಸರಿಪಡಿಸಿದ ಮಾಹಿತಿಯನ್ನು ತಮ್ಮಲ್ಲಿ ಕಾಯ್ದಿರಿಸಿಕೊಂಡು ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ಹಾಜರುಪಡಿಸಲು ಸೂಚಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...