ಗದಗ: ಕರ್ತವ್ಯನಿರತ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಅಸ್ಸಾಂ ಹಾಗೂ ಸಿಕ್ಕಿಂ ನಡುವಿನ ಬಾಂಗ್ ಡೊಂಗ್ನಲ್ಲಿ ನಡೆದಿದೆ.
ಹುತಾತ್ಮ ಯೋಧರನ್ನು ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೇರ ನಾಗನೂರ ಗ್ರಾಮದ ರಾಮನಗೌಡ ಕರಬಸನಗೌಡ್ರ (44) ಎಂದು ಗುರುತಿಸಲಾಗಿದೆ. ಅಸ್ಸಾಂ ಹಾಗೂ ಸಿಕ್ಕಿಂ ನಡುವಿನ ಬಾಂಗ್ ಡೊಂಗ್ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತ ಆಗಿದೆ. ರಕ್ತದೊತ್ತಡದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಫೆ.7ರಂದು ಹುತಾತ್ಮ ಯೋಧನ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದೆ ಎಂದು ತಿಳಿದುಬಂದಿದೆ.