ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗುವಲ್ಲಿ ವಿಫಲವಾದ ನಿದರ್ಶನಗಳನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರ, ಇದಕ್ಕೆ ಕಾರಣಗಳನ್ನು ಗುರುತಿಸಿದೆ.
ಮುಚ್ಚಲ್ಪಟ್ಟ/ವರ್ಗಾಯಿಸಲ್ಪಟ್ಟ ಖಾತೆ, ಅಮಾನ್ಯವಾದ ಐಎಫ್ಎಸ್ಸಿ, ನಿಷ್ಕ್ರಿಯ ಖಾತೆ, ಕ್ರೆಡಿಟ್/ಡೆಬಿಟ್ ವ್ಯವಹಾರದ ಮೇಲೆ ನಿಗದಿ ಮಾಡಿದ ಮಿತಿ ಮೀರಿದ ಖಾತೆ, ಖಾತೆದಾರರು ಮೃತಪಟ್ಟಾಗ, ಬ್ಲಾಕ್ ಮಾಡಲ್ಪಟ್ಟ ಖಾತೆ, ನಿಷ್ಕ್ರಿಯವಾದ ಆಧಾರ್, ನೆಟ್ವರ್ಕ್ ವೈಫಲ್ಯದಂಥ ಕಾರಣಗಳಿಂದ ಹಣ ವರ್ಗಾವಣೆ ವಿಫಲವಾಗಿದೆ ಎಂದು ಗುರುತಿಸಲಾಗಿದೆ.
ಗ್ರಾಹಕರಿಗೆ ಗುಡ್ ನ್ಯೂಸ್: ಬ್ಯಾಂಕ್ ಮುಚ್ಚಿದರೆ 90 ದಿನದಲ್ಲಿ 5 ಲಕ್ಷ ರೂ. ಪರಿಹಾರ
ವ್ಯವಹಾರ ವೈಫಲ್ಯವಾದ ಪ್ರಕರಣಗಳನ್ನು ಸರಿಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದಿಷ್ಟ ಕಾರ್ಯಚರಣಾ ಪ್ರಕ್ರಿಯೆ (ಎಸ್ಓಪಿ) ರವಾನೆ ಮಾಡಿದೆ.
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳ ಅವಧಿಗೊಮ್ಮೆ 2,000 ರೂಪಾಯಿಗಳನ್ನು ಫಲಾನುಭವಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
ಯೋಜನೆ ಘೋಷಣೆಯಾದಾಗಿನಿಂದ ಇದುವರೆಗೂ ಒಟ್ಟಾರೆ 40,16,867 ವಹಿವಾಟುಗಳು ರದ್ದಾಗಿವೆ. ಯೋಜನೆಯಡಿ ಒಟ್ಟಾರೆ 68,76,32,104 ವಹಿವಾಟುಗಳು ನಡೆದಿದ್ದು, ಇದರಲ್ಲಿ 1%ನಷ್ಟು ಮಾತ್ರವೇ ರದ್ದಾಗಿದೆ.