alex Certify BIG NEWS: ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ಕಾರ್ಟ್ – NCERT ನಡುವೆ ಒಪ್ಪಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ಕಾರ್ಟ್ – NCERT ನಡುವೆ ಒಪ್ಪಂದ

ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಜೊತೆಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶಾದ್ಯಂತ NCERT ಪುಸ್ತಕಗಳು ಕೈಗೆಟುಕುವ ಮತ್ತು ತಡೆರಹಿತವಾಗಿ ಲಭ್ಯವಾಗುವಂತೆ ಮಾಡುವುದು ಈ ಮಹತ್ವದ ಒಪ್ಪಂದದ ಉದ್ದೇಶವಾಗಿದೆ.

2 ಮತ್ತು 3 ನೇ ಶ್ರೇಣಿಯ ನಗರಗಳು ಸೇರಿದಂತೆ ದೇಶಾದ್ಯಂತ ವಿಸ್ತಾರವಾಗಿರುವ ಫ್ಲಿಪ್ ಕಾರ್ಟ್ ನ ಸೇವೆಯ ಉಪಸ್ಥಿತಿಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮತ್ತು ಕಲಿಯುವವರಿಗೆ NCERT ಪಠ್ಯಗಳನ್ನು ಪೂರೈಸಲಾಗುತ್ತದೆ. ಈ ಸಹಭಾಗಿತ್ವದಡಿಯಲ್ಲಿ ಫ್ಲಿಪ್ ಕಾರ್ಟ್ ತನ್ನ ಆನ್ಲೈನ್ ಮಾರ್ಕೆಟ್ ಪ್ಲೇಸ್ ಮೂಲಕ NCERT ಪಠ್ಯಗಳನ್ನು ಮಾರಾಟ ಮತ್ತು ವಿತರಣೆ ಮಾಡಲಿದೆ. ಇದರೊಂದಿಗೆ NCERT ನಿಂದ ನಿಗದಿಪಡಿಸಿದ ಅಧಿಕೃತ ಮಾರಾಟಗಾರರ ಮೂಲಕ ಹೆಚ್ಚಿನ ಜನರನ್ನು ತಲುಪುವುದನ್ನುಖಚಿತಪಡಿಸಿಕೊಳ್ಳಲಿದೆ.

ಶಿಕ್ಷಣದ ಪ್ರವೇಶವನ್ನು ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದ ಮತ್ತು ರಾಷ್ಟ್ರವ್ಯಾಪಿ ಅಂತರ್ಗತ ಕಲಿಕೆಯ ಅವಕಾಶಗಳನ್ನು ಉತ್ತೇಜಿಸುವ ಭಾರತ ಸರ್ಕಾರದ ಧ್ಯೇಯಕ್ಕೆ ಪೂರಕವಾಗಿ ಈ ಸಹಭಾಗಿತ್ವವನ್ನು ಒಪ್ಪಂದದ ಮೂಲಕ ಅಧಿಕೃತಗೊಳಿಸಲಾಗಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು(ಸ್ವತಂತ್ರ ಉಸ್ತುವಾರಿ), ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವರಾದ ಜಯಂತ್ ಚೌಧರಿ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಉಪಸ್ಥಿತಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ದೆಹಲಿಯ NCERT ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವಾಲಯ ಮತ್ತು NCERT ಅಧಿಕಾರಿಗಳು ಮತ್ತು ಫ್ಲಿಪ್ ಕಾರ್ಟ್ ಅಧಿಕಾರಿಗಳು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು. ಇದು ದೇಶಾದ್ಯಂತ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರವೇಶವನ್ನು ಉತ್ತೇಜಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಈ ಸಹಯೋಗದಡಿ ಫ್ಲಿಪ್ ಕಾರ್ಟ್ ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ NCERT ಪಠ್ಯಗಳನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡುವ ಮೂಲಕ ವ್ಯಾಪಕ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ. ಇದಲ್ಲದೇ, ಅಧಿಕೃತ ಉತ್ತಮ ಗುಣಮಟ್ಟದ ವಿಷಯದ ಲಭ್ಯತೆಯನ್ನು ಖಾತರಿಪಡಿಸಲು ಫ್ಲಿಪ್ ಕಾರ್ಟ್ ಮತ್ತು NCERT ಒಟ್ಟಾಗಿ ಕೆಲಸ ಮಾಡಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...