ಬೆಂಗಳೂರು : ಹಾಲಿನ ದರ ಲೀ.ಗೆ 10 ರೂ ಹೆಚ್ಚಳಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು ಹಾಲಿನ ದರ ಲೀ.ಗೆ 10 ರೂ ಹೆಚ್ಚಳಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ, ಹಾಲಿನ ದರ ಏರಿಕೆ ಸರ್ಕಾರದ ತೀರ್ಮಾನದ ಹಂತದಲ್ಲಿದೆ ಎಂದರು.
ಹಾಲಿನ ಉತ್ಪಾದನೆ ವೆಚ್ಚ ಸಹ ಜಾಸ್ತಿಯಾಗಿದೆ. ಹಾಲಿನ ಖರೀದಿ ದರ ಹೆಚ್ಚಿಸಬೇಕೆಂಬ ಬೇಡಿಕೆ ಸರಿಯಾಗಿಯೇ ಇದೆ. ದರ ಹೆಚ್ಚಳ ಸಂಬಂಧ ಈಗಾಗಲೇ ಚರ್ಚಿಸಲಾಗಿದೆ. ಅಂತಿಮವಾಗಿ ಸರ್ಕಾರ ನಿರ್ಧರಿಸಲಿದೆ ಎಂದರು.
ನಾಳೆ ಹಾಲಿನ ದರ ಏರಿಕೆ ಬಗ್ಗೆ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.