ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ /ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಾಲಾವಧಿಯಲ್ಲಿ ಮಾನ್ಯತೆ ಪಡೆಯಲು ವಿಫಲರಾಗಿರುವುದು ಹಾಗೂ ಹಲವು ಶಾಲೆಗಳ ಮಾನ್ಯತೆ ಕೋರಿ ಸಲ್ಲಿಸಿದ ಅರ್ಜಿಗಳು ದಾಖಲೆ/ಮಾಹಿತಿಗಳ ಕೊರತೆಯ ಕಾರಣದಿಂದ ತಿರಸ್ಕೃತಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ 2024-25ನೇ ನಾಲಿಗೆ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯಲು ಖಾಸಗಿ ಅನುದಾನಿತ/ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಮಾನ್ಯತೆ ನವೀಕರಣ ಮಾಡಿಕೊಳ್ಳುವ ಮತ್ತು ಆ ರೀತಿ ಮಾನ್ಯತೆ ನವೀಕರಣ ಮಾಡಿಕೊಳ್ಳಲು ವಿಫಲರಾಗುವ ಶಾಲೆಗಳ ನೊಂದಣಿಯನ್ನು ವಿಯಮಾನುಸಾರ ರದ್ದುಪಡಿಸುವ ಮತ್ತು ಮಾನ್ಯತೆಯನ್ನು ಹಿಂಪಡೆಯುವ ಷರತ್ತಿಗೊಳಪಡಿಸಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೊನೆಯ ಬಾರಿಗೆ ಮಾತ್ರ 2024-25ನೇ ನಾಲಿನ ಮಾನ್ಯತೆ ನವೀಕರಣಕ್ಕೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಿದೆ.
ಆದ್ದರಿಂದ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರಿಗಳಾದ ಉಪನಿರ್ದೇಶಕರು(ಆಡಳಿತ) ಇವರು ವೈಯುಕ್ತಿಕ ಗಮನಹರಿಸಿ ತಮ್ಮ ವ್ಯಾಪ್ತಿಯಲ್ಲಿ ಈವರೆವಿಗೂ 2024-25ನೇ ಸಾಲಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯದಿರುವ ಶಾಲಾ ಆಡಳಿತ ಮಂಡಳಿಗಳಿಗೆ ಸೂಕ್ತ ಮಾಹಿತಿ ನೀಡಿ ಎಲ್ಲಾ ಅಗತ್ಯ ದಾಖಲೆ/ಮಾಹಿತಿಗಳೊಂದಿಗೆ ಆನ್ಲೈನ್ ಮೂಲಕ ಪೂರ್ಣ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ಪಡೆಯಲು ಸೂಚನೆ ನೀಡಲು ತಿಳಿಸಿದೆ.
ಈ ಅವಧಿಯ ನಂತರ ಪುನ: ಅರ್ಜಿ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂಬ ಅಂಶವನ್ನು ಪುನರುಚ್ಚರಿಸುತ್ತಾ, ಸಲ್ಲಿಸಿದ ಅರ್ಜಿಯು ತಿರಸ್ಕರಿಸಲು ಅವಕಾಶವಾಗದಂತೆ ಪೂರ್ಣ ದಾಖಲೆಗಳನ್ನು ಸಲ್ಲಿಸಲು ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ. ಮಾನ್ಯತೆ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ವಿಳಂಬಕ್ಕೆ ಅವಕಾಶ ನೀಡದಂತೆ ಅಯಾ ದಿನವೇ ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಪಡಿಸಲು ಸಕ್ಷಮ ಪ್ರಾಧಿಕಾರಿಗಳು ಅಗತ್ಯ ಕ್ರಮ ವಹಿಸಲು ಸೂಚಿಸಿದೆ. ಉಳಿದಂತೆ ಉಲ್ಲೇಖ(2) ರಿಂದ (9)ರವರೆಗಿನ ಸುತ್ತೋಲೆಗಳಲ್ಲಿನ ಎಲ್ಲಾ ಅಂಶಗಳು ಯಥಾವತ್ತಾಗಿರುತ್ತದೆ.


