ಬೆಂಗಳೂರು : ರಾಜ್ಯದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್ಲೈನ್ನಲ್ಲಿ ನಮೂದು ಮಾಡುವಂತೆ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಸ್ಥರಿಗೆ ತಮ್ಮ ಶಾಲೆಯ 2025 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಣಿಯಾಗಿರುವ ಎಲ್ಲಾ ಶಾಲಾ ವಿದ್ಯಾರ್ಥಿಗಳ (CCERF) ಆಂತರಿಕ ಅಂಕಗಳನ್ನು ಆನ್ಲೈನ್ನಲ್ಲಿ ನಮೂದು ಮಾಡಲು ದಿನಾಂಕ: 05-02-2025 ರಿಂದ ಅವಕಾಶ ಕಲ್ಪಿಸಲಾಗಿದೆ.
ಮಂಡಲಿಯ ಜಾಲತಾಣದಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯಲ್ಲಿ ನೋಂದಣಿಯಾಗಿರುವ ಎಲ್ಲಾ, ಶಾಲಾ ವಿದ್ಯಾರ್ಥಿಗಳ (CCERF) ಅಂತರಿಕ ಅಂಕಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ನಮೂದು ಮಾಡಲು ಸೂಚಿಸಿದ.
1. ಮಂಡಲಿಯ ಜಾಲತಾಣ https://kseab.karnataka.gov.in/ನ ಶಾಲಾ ಲಾಗಿನ್ನಲ್ಲಿ ತಂತ್ರಾಂಶ ಲಭ್ಯವಿದೆ.
2. ಲಾಗಿನ್ ಆದ ನಂತರ ಮೊದಲು Internal Marks Entry – 2025 ಮೇಲೆ ಕ್ಲಿಕ್ ಮಾಡಬೇಕು. ತೆರೆಯಲಾಗುವ ವೆಬ್ಪೇಜ್ನಲ್ಲಿ ವಿದ್ಯಾರ್ಥಿಯ ಎಸ್.ಎ.ಟಿ.ಎಸ್ (SATS NUMBER) ಸಂಖ್ಯೆಯನ್ನು ನಮೂದಿಸಿ Enter ಬಟನ್ನ್ನು ಒತ್ತುವುದು. ಆಗ ಉಲ್ಲೇಖಿತ ಮಾರ್ಗಸೂಚಿಯಲ್ಲಿ ವಿವರಿಸಿರುವಂತೆ, ಪ್ರತಿ ವಿದ್ಯಾರ್ಥಿಯು ಕನಿಷ್ಠ ಶೇಕಡಾ 75 ರಷ್ಟು ಹಾಜರಾತಿಯನ್ನು ಹೊಂದಿರುವ ಬಗ್ಗೆ ‘Yes’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ‘No’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ನೀಡಿರುವುದಿಲ್ಲ. ಅಂದರೆ ಆ ವಿದ್ಯಾರ್ಥಿಯು 2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಪರೀಕ್ಷೆ-2 ಮತ್ತು ಪರೀಕ್ಷೆ – 3ನ್ನು ಬರೆಯಲು ಅರ್ಹನಿರುವುದಿಲ್ಲ. 2025-26ನೇ ಸಾಲಿನಲ್ಲಿ ಶಾಲೆಗೆ ಮರು ದಾಖಲಾಗಿ ಪರೀಕ್ಷೆ ತೆಗೆದುಕೊಳ್ಳುವುದು ಎಂದರ್ಥ. (ಮಾರ್ಚ್ ಮಾಹೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. 2025 ಪರೀಕ್ಷೆ-1 ರ ಹಿಂದಿನ ದಿನಕ್ಕೆ ಅನ್ವಯವಾಗುವಂತೆ ಶೇ.75 ರಷ್ಟು ಹಾಜರಾತಿಯನ್ನು ಲೆಕ್ಕಾಚಾರ ಮಾಡುವುದು)
3. ನಿಗದಿತ ಹಾಜರಾತಿ ‘No’ಎಂದು select ಮಾಡಲ್ಪಟ್ಟ ವಿದ್ಯಾರ್ಥಿಗಳ ಮಾಹಿತಿಯನ್ನು ಸಹ Save ಮಾಡಿ Freeze ಮಾಡುವುದು ಕಡ್ಡಾಯವಾಗಿರುತ್ತದೆ. ಈ ವಿದ್ಯಾರ್ಥಿಗಳ ನೋಂದಣಿಯನ್ನು ರದ್ದುಪಡಿಸಲಾಗುವುದು ಮತ್ತು ಅಂತಿಮ ಪ್ರವೇಶ ಪತ್ರವನ್ನು ನೀಡಲಾಗುವುದಿಲ್ಲ.
4. ನಿಗದಿತ ಹಾಜರಾತಿ ‘Yes’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಯ ಎಲ್ಲಾ ಮಾಹಿತಿಗಳು Display ಆಗುತ್ತವೆ. ಸದರಿ ಎಲ್ಲಾ ಮಾಹಿತಿಗಳು ಆಂತರಿಕ ಅಂಕಗಳನ್ನು ನಮೂದು ಮಾಡುತ್ತಿರುವ ನಿರ್ದಿಷ್ಟ ವಿದ್ಯಾರ್ಥಿಯದೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಆಂತರಿಕ ಅಂಕಗಳನ್ನು ನಮೂದಿಸುವುದು.
5. ವಿದ್ಯಾರ್ಥಿಯು ತೆಗೆದುಕೊಂಡಿರುವ ಭಾಷೆ ಮತ್ತು ವಿಷಯಗಳು ಹಾಗೂ ತಂತ್ರಾಂಶದಲ್ಲಿ Display ಆಗಿರುವ ಭಾಷೆ ಮತ್ತು ವಿಷಯಗಳು ಸಹ ಹೊಂದಾಣಿಕೆಯಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಂಡು, ಆಯಾ ಭಾಷೆ ಮತ್ತು ವಿಷಯಗಳಿಗೆ ಅನುಗುಣವಾಗಿ ಆಂತರಿಕ ಅಂಕಗಳನ್ನು ನಮೂದಿಸುವುದು ಎಂದು ಸೂಚಿಸಿದೆ.