ಬೆಂಗಳೂರು : ಮಾ. 22ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿಶ್ವ ಜಲ ದಿನ ಆಚರಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ಸುತ್ತೋಲೆಯಲ್ಲಿ..?
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಮಾರ್ಚ್ 22 ರಂದು ಆಚರಿಸಲಾಗುವ ವಿಶ್ವ ಜಲ ದಿನ (WWD)2025, ನೀರಿನ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇದು ಸುರಕ್ಷಿತ ನೀರಿನ ಜಾಗೃತಿ ಮತ್ತು ಜಾಗತಿಕ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಕ್ರಮ ಕೈಗೊಳ್ಳಲು ಪ್ರೇರೇಪಿಸುತ್ತದೆ. ಈ ವರ್ಷದ ಧೈಯವಾಕ್ಯವಾದ ‘ಹಿಮನದಿ ಸಂರಕ್ಷಣೆ” (Glacier Preservation)ಯು ಲಕ್ಷಾಂತರ ಜನರಿಗೆ ಸಿಹಿನೀರಿನ ಪ್ರಮುಖ ಮೂಲಗಳಾದ ಕರಗುವ ಹಿಮನದಿಗಳನ್ನು ರಕ್ಷಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. 2025 ರ ವಿಶ್ವ ಜಲ ದಿನವು ಭವಿಷ್ಯದ ಪೀಳಿಗೆಗೆ ಈ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಮತ್ತು ನಿರ್ಣಾಯಕ ಹವಾಮಾನ ಬದಲಾವಣೆಯ ವಿರುದ್ಧ ಸಾಮೂಹಿಕ ಕ್ರಮ ಕೈಗೊಳ್ಳಲು ಪ್ರೇರೆಪಿಸುತ್ತದೆ.
ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಶ್ವ ಜಲ ದಿನ (WWD) ವನ್ನು ದಿನಾಂಕ:22/03/2025 ರಂದು ಆಚರಿಸಲು ಕ್ರಮವಹಿಸುವುದು.ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ರವರು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳಲ್ಲಿ “ವಿಶ್ವ జల (WWD)2025” ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸುವುದು ಮತ್ತು ಕಾರ್ಯಕ್ರಮದ ವರದಿಯನ್ನು ಚಟುವಟಿಕೆಗಳ ಕಿರು ವೀಡಿಯೊಗಳು ಮತ್ತು ಹೈ-ಡೆಫಿನಿಷನ್ ಛಾಯಾಚಿತ್ರಗಳನ್ನು ರಾಜ್ಯ ಕಛೇರಿಯ ಇ-ಮೇಲ್ ssknasinn@gmail.com ಗೆ 31/03/2025 ರೊಳಗಾಗಿ ಸಲ್ಲಿಸುವಂತೆ ಸೂಚಿಸಿದೆ.
