ಬೆಂಗಳೂರು: ವಿರೋಧದ ನಡುವೆಯೂ ಶಾಲೆಗಳಲ್ಲಿ ಧ್ಯಾನ ಕ್ಲಾಸ್ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಧ್ಯಾನ ಕಲಿಸಲು ಸಜ್ಜಾಗಿದೆ.
ಮುಂದಿನ ತಿಂಗಳಿನಿಂದ ಶಾಲೆಗಳಲ್ಲಿ ಧ್ಯಾನ ಕಲಿಸುವ ಯೋಜನೆ ಜಾರಿಗೊಳಿಸಲಾಗುತ್ತದೆ. ಪತಂಜಲಿ ಯೋಗ ಎಕ್ಸ್ ಪರ್ಟ್ ಗಳ ಸಲಹೆ ಪಡೆಯಲು ಚಿಂತನೆ ನಡೆದಿದೆ. ಅಲ್ಲದೇ, ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿಯವರ ಸಲಹೆ ಪಡೆಯಲು ಚಿಂತನೆ ನಡೆಸಲಾಗಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಯಾವ ರೀತಿ ಧ್ಯಾನ ಹೇಳಿಕೊಡಬೇಕು? ಎಷ್ಟು ಹೊತ್ತು ಧ್ಯಾನ ಮಾಡಬೇಕು ಎಂಬುದರ ಬಗ್ಗೆ ಸಲಹೆ ಪಡೆಯಲಾಗುವುದು. ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಕಲಿಸಿಕೊಡಲಾಗುವುದು. ಹೀಗೆ ಟೀಕೆಗಳ ನಡುವೆಯೂ ಧ್ಯಾನ ಕ್ಲಾಸ್ ಜಾರಿಗೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.