ಬೆಂಗಳೂರು : ಪಠ್ಯ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸುವ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.
2025-26 ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ರವಾನಿಸುವ ಸಂಬಂಧ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಚಾಲ್ತಿಯಲ್ಲಿದೆ. ಶಾಲೆಗಳ ಮುಖ್ಯಶಿಕ್ಷಕರು ಬೇಡಿಕೆ ಸಲ್ಲಿಸುವ ಸಂದರ್ಭದಲ್ಲಿ ಶಾಲೆಗೆ ಅಗತ್ಯವಿರುವ ಪಠ್ಯಪುಸ್ತಕಗಳನ್ನು ಮಾತ್ರವೇ ಸರಿಯಾದ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸಲು ತಿಳಿಸಲಾಗಿದ್ದು, ಈ ಸಂಬಂಧ ಅಡಕಗೊಳಿಸಿರುವ ಅನುಬಂಧ-1 ರಿಂದ 4 ಅನ್ನು ಅಧ್ಯಯನ ಮಾಡಿಕೊಂಡು ಶಾಲೆಗಳಿಗೆ ಅಗತ್ಯವಿರುವ ಶೀರ್ಷಿಕೆಗಳನ್ನು ಮಾತ್ರವೇ ಬೇಡಿಕೆ ಸಲ್ಲಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. 2025-26 ನೇ ಸಾಲಿಗೆ ಸರಿಯಾದ ಶೀರ್ಷಿಕೆಗಳನ್ನು ಕೊಟ್ಟು ಬೇಡಿಕೆ ಸಲ್ಲಿಸುವಂತೆ ಸೂಚನೆ ನೀಡಿದೆ.