alex Certify BIG NEWS: ED ಸಮನ್ಸ್ BJP ಕುತಂತ್ರದ ಭಾಗ; ರಾಜಕೀಯ ಎದುರಾಳಿಗಳನ್ನು ಎದುರಿಸಲಾಗದೇ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ; ಕಿಡಿ ಕಾರಿದ ದಿನೇಶ್ ಗುಂಡೂರಾವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ED ಸಮನ್ಸ್ BJP ಕುತಂತ್ರದ ಭಾಗ; ರಾಜಕೀಯ ಎದುರಾಳಿಗಳನ್ನು ಎದುರಿಸಲಾಗದೇ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ; ಕಿಡಿ ಕಾರಿದ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜಕೀಯ ಎದುರಾಳಿಗಳನ್ನು ಸೈದಾಂತಿಕವಾಗಿ ಎದುರಿಸಲಾಗದ ಬಿಜೆಪಿ, ಇಡಿ ಮತ್ತು ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಇಡಿ ಸಮನ್ಸ್ ನೀಡಿರುವುದು ಬಿಜೆಪಿಯ ಕುತಂತ್ರದ ಭಾಗ. ಇಡಿ ಹಾಗೂ ಸಿಬಿಐ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಆದರೆ ಈ ಸಂಸ್ಥೆಗಳು ಬಿಜೆಪಿಯ ಅಂಗಸಂಸ್ಥೆಯಾಗಿವೆ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಮೋದಿಯವರು ಪ್ರಧಾನಿಯಾದ ಬಳಿಕ‌ ಕೇವಲ ವಿರೋಧ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಇಡಿ, ಸಿಬಿಐ ಮತ್ತು ಐಟಿ ದಾಳಿ ನಡೆದಿದೆ. ಆದರೆ ಬಿಜೆಪಿಯ ಒಬ್ಬರೇ ಒಬ್ಬರ ಮೇಲೆ ದಾಳಿ ನಡೆದಿಲ್ಲ. ಹಾಗಾದರೆ ಬಿಜೆಪಿಯವರೇನು ಸಚ್ಛಾರಿತ್ರ್ಯರೆ ? ಸದ್ಗುಣ ಸಂಪನ್ನರೆ ? ಇಡಿಯವರ ಪ್ರಕಾರ ಆಪರೇಷನ್ ಕಮಲದಲ್ಲಿ ಕೈ ಬದಲಾದ ಸಾವಿರಾರು ಕೋಟಿ ಹಣ ಅಕ್ರಮ ಸಂಪತ್ತಲ್ಲವೆ ? ಎಂದು ಪ್ರಶ್ನಿಸಿದ್ದಾರೆ.

ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾಗಿರುವ ಇಡಿ ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ. ಆಳುವ ಸರ್ಕಾರವೊಂದು‌ ಸಾಂವಿಧಾನಿಕ ಸಂಸ್ಥೆಗಳನ್ನು ಇಷ್ಟು ಕೀಳುಮಟ್ಟದಲ್ಲಿ ದುರುಪಯೋಗಿಸಿಕೊಂಡ‌ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಬಿಜೆಪಿಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಇದನ್ನು ಪ್ರಜ್ಞಾವಂತ ಸಮಾಜ ಖಂಡಿಸಬೇಕಿದೆ ಎಂದು ಕಿಡಿಕಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...