ಹೈದರಾಬಾದ್: ಸ್ಯಾಂಡಲ್ ವುಡ್, ಬಾಲಿವುಡ್ ಬಳಿಕ ಇದೀಗ ಟಾಲಿವುಡ್ ನ ಸ್ಟಾರ್ ನಟ-ನಟಿಯರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿದ್ದು, ಇದೀಗ ಸ್ಟಾರ್ ನಟ ರವಿತೇಜ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ನಟ ರವಿತೇಜ ಇಂದು ಇಡಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದು, ಈ ವೇಳೆ ಬ್ಯಾಂಕ್ ವ್ಯವಹಾರಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
BIG NEWS: ಕಾನೂನು ಹೋರಾಟದಲ್ಲಿ ಕಂಗನಾ ರಣಾವತ್ ಗೆ ಹಿನ್ನಡೆ
ಟಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ರಾಣಾ, ನಿರ್ದೇಶಕ ಪುರಿ ಜಗನ್ನಾಥ್, ನಟಿಯರಾದ ಚಾರ್ಮಿ ಕೌರ್, ರಾಕುಲ್ ಪ್ರೀತ್ ಸಿಂಗ್, ಮುಮೈತ್ ಖಾನ್ ಸೇರಿದಂತೆ ಹಲವು ಸ್ಟಾರ್ ನಟ ನಟಿಯರು ಇಡಿ ವಿಚಾರಣೆ ಎದುರಿಸಿದ್ದಾರೆ.