ಬೆಂಗಳೂರು: ಕರ್ನಾಟಕ ಹೈಕೋರ್ಟ್ ಗೆ ನಾಳೆಯಿಂದ 10 ದಿನ ದಸರಾ ರಜೆ ಇರಲಿದೆ. ರಾಜ್ಯ ಹೈಕೋರ್ಟ್ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಅಕ್ಟೋಬರ್ 3ರಿಂದ 10ರವರೆಗೆ ದಸರಾ ರಜೆ ಇರಲಿದ್ದು, ಅಕ್ಟೋಬರ್ 14ರಂದು ಮತ್ತೆ ನ್ಯಾಯಾಲಯದ ಕಲಾಪಗಳು ಪುನರಾರಂಭವಾಗಲಿವೆ.
ಅಕ್ಟೋಬರ್ 4 ಮತ್ತು 9ರಂದು ರಜಾಕಾಲೀನ ಪೀಠಗಳು ಕರ್ತವ್ಯ ನಿರ್ವಹಿಸಲಿವೆ. ಈ ವೇಳೆ ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ರಜಾಕಾಲೀನ ಪೀಠಗಳು ವಿಚಾರಣೆ ನಡೆಸಲಿವೆಅ. 2ರಂದು ಗಾಂಧಿ ಜಯಂತಿ, ಅ. 11ರಂದು ಆಯುಧಪೂಜೆ, ಅ. 12ರಂದು ವಿಜಯದಶಮಿ, ಎರಡನೇ ಶನಿವಾರ, ಅ. 13 ಭಾನುವಾರ ರಜೆ ಇರುವುದರಿಂದ ಅಕ್ಟೋಬರ್ 14 ರಿಂದ ಕೋರ್ಟ್ ಕಲಾಪಗಳು ಪುನರಾರಂಭ ಆಗಲಿವೆ.