alex Certify BIG NEWS : ʻಕೆ-ಸೆಟ್ʼ ಪರೀಕ್ಷೆಗೆ ʻವಸ್ತ್ರ ಸಂಹಿತೆʼ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ʻಕೆ-ಸೆಟ್ʼ ಪರೀಕ್ಷೆಗೆ ʻವಸ್ತ್ರ ಸಂಹಿತೆʼ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

 

ಬೆಂಗಳೂರು : ಜನವರಿ 13 ರಂದು ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)‌ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ವಸ್ತ್ರ ಸಂಹಿತೆಯನ್ನು ಪ್ರಕಟಿಸಿದ್ದು, ಸರಳ ಉಡುಪು ಧರಿಸಿ ಬರಲು ಸೂಚನೆ ನೀಡಿದೆ.

ಕೆ-ಸೆಟ್‌ ಪರೀಕ್ಷೆ  ಜನವರಿ 13 ರ ಬೆಳಗ್ಗೆ 10 ರಿಂದ 11 ಮತ್ತು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ನಡೆಯಲಿದೆ. ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ ಸೈಟ್‌ http://kea.kar.nic.in ನಲ್ಲಿ ಪ್ರವೇಶ ಪತ್ರವನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಪ್ರವೇಶ ಪತ್ರದ ಜೊತೆಗೆ ಆಧಾರ್‌ ಕಾರ್ಡ್‌ ಸೇರಿದಂತೆ ಯಾವುದೇ ಸರ್ಕಾರದ ಮಾನ್ಯತೆಯ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅರೆತೋಳಿನ ಅಂಗಿ, ಹೆಚ್ಚಿನ ಚೇಬುಗಳಲ್ಲಿದ ಸರಳ ಪ್ಯಾಂಟ್‌ ಧರಿಸಿ ಬರುವುದು ಕಡ್ಡಾಯ. ಬೆಲ್ಟ್‌, ಶೂಗಳನ್ನು ನಿಷೇಧಿಸಲಾಗಿದೆ. ಕಂಠಾಭರಣ, ಕಿವಿಯೋಲೆ, ಉಂಗುರ ಮತ್ತು ಕೈಡಗಳನ್ನು ಧರಿಸುವಂತಿಲ್ಲ.

ಮಹಿಳಾ ಅಭ್ಯರ್ಥಿಗಳು ಹೂಗಳು, ಬ್ರೂಚ್‌, ಬಟನ್‌, ಪೂರ್ಣ ತೋಳಿನ ರವಿಕೆ/ವಸ್ತ್ರ ಇರುವ ಉಡುಪು ಮತ್ತು ಜೀನ್ಸ್‌ ಪ್ಯಾಂಟ್‌ ಹಾಗೂ ಶೂ, ದಪ್ಪ ಸೋಲ್‌ ನ ಚಪ್ಪಲಿ ಧರಿಸಿ ಬರುವಂತಿಲ್ಲ. ಜೊತೆಗೆ ಪೆನ್‌ ಡ್ರೈವ್‌, ಕೈಗಡಿಯಾರ, ಮೈಕ್ರೋ ಫೋನ್‌ ಸೇರಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತರುವಂತಿಲ್ಲ. ಆದರೆ ಮಂಗಳಸೂತ್ರ, ಕಾಲುಂಗುರ ಧರಿಸಲು ಅವಕಾಶ ನೀಡಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...