ಚೆನ್ನೈನಲ್ಲಿ ಇಬ್ಬರು ಮಕ್ಕಳಿಗೆ HMPV ಸೋಂಕು ತಗುಲಿದ್ದು, ಕರ್ನಾಟಕ ಸೇರಿ ದೇಶದಲ್ಲಿ 24 ಗಂಟೆಗಳಲ್ಲಿ 5 ಪ್ರಕರಣ ದಾಖಲಾಗಿದೆ.
ಕರ್ನಾಟಕ ಮತ್ತು ಗುಜರಾತ್ ನಂತರ ಚೆನ್ನೈನಲ್ಲಿ ಸೋಮವಾರ ಮೂವರು ಮಕ್ಕಳಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್(ಹೆಚ್ಎಂಪಿವಿ) ಪಾಸಿಟಿವ್ ದೃಢಪಟ್ಟಿದೆ.
ಎಚ್ಎಂಪಿವಿ ವೈರಸ್ ಬಗ್ಗೆ ಆತಂಕ ಬೇಡ, ಇರಲಿ ಈ ಎಚ್ಚರ
• ಸೀನುವಾಗ ಅಥವಾ ಕೆಮ್ಮುವಾಗ ಕರವಸ್ತ್ರವನ್ನು ಉಪಯೋಗಿಸಿ
• ಸ್ಯಾನಿಟೈಸರ್ ಅಥವಾ ಸೋಪ್ನಿಂದ ನಿಮ್ಮ ಕೈಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ
• ಜನಸಂದಣಿ ಹೆಚ್ಚಿರುವ ಸ್ಥಳಗಳಿಗೆ ತೆರಳಬೇಡಿ
• ಜ್ವರ, ಕೆಮ್ಮು ಅಥವಾ ಶೀತದ ಲಕ್ಷಣಗಳಿದ್ದಲ್ಲಿ ಹೊರಗಡೆ ಓಡಾಡದಿರಿ
• ಬಿಸಿ ನೀರು ಕುಡಿಯಿರಿ ಮತ್ತು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿ
• ಅನಾರೋಗ್ಯವಿದ್ದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ, ಮನೆಯಲ್ಲೇ ಸುರಕ್ಷಿತವಾಗಿರಿ
ಎಚ್ಎಂಪಿವಿ ವೈರಸ್ ಬಗ್ಗೆ ಆತಂಕ ಬೇಡ, ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ.#HMPV#HMPVVirus#StaySafe#HealthForAll @CMofKarnataka @siddaramaiah @dineshgrao @DHFWKA pic.twitter.com/IUg9jTFGI1
— DIPR Karnataka (@KarnatakaVarthe) January 6, 2025