ಮಂಗಳೂರು : ಖ್ಯಾತ ನಟ ವಿಶಾಲ್ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ನಿಮಗೆ ಗೊತ್ತಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರು ನಡುಗುತ್ತಾ ಮಾತನಾಡಿದ್ದರು. ಸ್ಟೇಜ್ ನಲ್ಲಿಅವರು ಕೈಗಳನ್ನು ನಡುಗಿಸುತ್ತಾ ತೊದಲು ಮಾತನಾಡಿದ್ದರು. ಇದರಿಂದ ಅವರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂಬುದು ಗೊತ್ತಾಗಿತ್ತು.
ಈ ಹಿನ್ನೆಲೆ ನಟ ವಿಶಾಲ್ ಅವರು ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಅವರು ಭೇಟಿ ನೀಡಿದ್ದು, ಆರೋಗ್ಯ ಸಮಸ್ಯೆಯನ್ನು ನಿವಾರಿಸುವಂತೆ ದೈವದ ಮೊರೆ ಹೋಗಿದ್ದಾರೆ.
ಕಣ್ಣೀರು ಹಾಕಬೇಡ, ನಾನಿದ್ದೇನೆ ಎಂದು ಖ್ಯಾತ ನಟ ವಿಶಾಲ್ ಗೆ ತುಳುನಾಡಿನ ದೈವದ ಅಭಯ ನೀಡಿದೆ. ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಆರೋಗ್ಯ ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದಾರೆ. ಕಣ್ಣೀರು ಹಾಕಬೇಡ, ನಾನಿದ್ದೇನೆ. ನಿನ್ನ ಆರೋಗ್ಯ ಸರಿಯಾಗಲಿದೆ. ಗುಣಮುಖನಾಗಿ ಬಂದು ತುಲಾಭಾರ ಸೇವೆ ಅರ್ಪಿಸು ಎಂದು ದೈವ ಅಭಯ ನೀಡಿದೆ.