alex Certify BIG NEWS : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಅನಾಥವಾಗಿದ್ದ ಶ್ವಾನ ‘ಪೊಲೀಸ್ ಇಲಾಖೆ’ಗೆ ಸೇರ್ಪಡೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಅನಾಥವಾಗಿದ್ದ ಶ್ವಾನ ‘ಪೊಲೀಸ್ ಇಲಾಖೆ’ಗೆ ಸೇರ್ಪಡೆ.!

ಉತ್ತರ ಕನ್ನಡ : ಶಿರೂರು ಗುಡ್ಡ ಕುಸಿತದಲ್ಲಿ ಅನಾಥವಾಗಿದ್ದ ಶ್ವಾನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಸಂಭವಿಸಿತ್ತು. ಘಟನೆಯಲ್ಲಿ 11 ಜನರು ಮೃತಪಟ್ಟಿದ್ದರು. ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಲಕ್ಷ್ಮಣ್ ಎಂಬುವವರ ಕುಟುಂಬ ಮೃತಪಟ್ಟಿತ್ತು, ದುರಂತದಲ್ಲಿ ಲಕ್ಷ್ಮಣ್ , ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಮಣ್ಣಿದನಡಿ ಸಿಲುಕಿ ಮೃತಪಟ್ಟಿದ್ದರು. ಕುಟುಂಬದವರನ್ನು ಕಳೆದುಕೊಂಡ ಮನೆಯ ಶ್ವಾನ ಅನಾಥವಾಗಿತ್ತು, ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಶ್ವಾನ ಬಂದು ರೋಧಿಸುತ್ತಿತ್ತು, ಈ ಶ್ವಾನ ಇದೀಗ ಪೊಲೀಸ್ ಇಲಾಖೆ ಸೇರ್ಪಡೆಯಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಶ್ವಾನದವನ್ನು ದತ್ತು ಪಡೆದು ಪಳಗಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ನಡೆದ ಮ್ಯಾರಥಾನ್ ಓಟದಲ್ಲಿ ಈ ಶ್ವಾನ 5 ಕಿಮೀ ಸಂಚರಿಸಿ ಬೆಳ್ಳಿ ಪದಕ ಪಡೆದಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...