![](https://kannadadunia.com/wp-content/uploads/2022/09/arrest-1663675557.jpg)
ಬಾಗಲಕೋಟೆ : ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ ಸಂಬಂಧ ಆರೋಪಿ ಮೈಸೂರಿನ ಮನೋರಂಜನ್ ಜೊತೆಗೆ ಸಂಪರ್ಕದಲ್ಲಿದ್ದ ಬಾಗಲಕೋಟೆಯ ಯುವಕನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಗಲಕೋಟೆಯ ನವನಗರದ ಯುವಕನನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿ, ನಂತರ ವಶಕ್ಕೆ ಪಡೆದುಕೊಂಡು ದೆಹಲಿಗೆ ಕರೆದೊಯ್ದಿದ್ದಾರೆ. ಸಾಯಿಕೃಷ್ಣ ವಿಚಾರಣೆಗೆ ಒಳಗಾದ ಯುವಕನಾಗಿದ್ದು, ಪೊಲೀಸರು ಎರಡು ಗಂಟೆಗಳ ವಿಚಾರಣೆ ನಡೆಸಿದ್ದಾರೆ.
ಸಾಯಿಕೃಷ್ಣ ಕಂಪಿಯೂಟರ್ ಸೈನ್ಸ್ ಅಧ್ಯಯನ ಮಾಡಿದ್ದಾನೆ. ಮನೋರಂಜನ್ ಹಾಗೂ ಸಾಯಿಕೃಷ್ಣ ಜಗಲಿ ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್ ಓದುತ್ತಿದ್ದಾಗ ಒಂದೇ ರೂಮಿನಲ್ಲಿದ್ದರು ಎನ್ನಲಾಗಿದೆ.