ಬಜೆಟ್ ಅಧಿವೇಶನಕ್ಕೂ ಮುನ್ನ ಎಲ್ಲಾ 11 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯಲು ನಿರ್ಧರಿಸಲಾಗಿದೆ. ಹಕ್ಕುಬಾಧ್ಯತಾ ಸಮಿತಿಗೆ ಶಿಫಾರಸು ಮಾಡಲಾದ ಎಲ್ಲಾ 11 ರಾಜ್ಯಸಭಾ ಸಂಸದರ ಅಮಾನತು ನಾಳೆಯಿಂದ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಅಮಾನತುಗೊಂಡ ಸಂಸದರು ಲಿಖಿತ ಕ್ಷಮೆಯಾಚನೆಯನ್ನು ಕಳುಹಿಸಿದ್ದಾರೆ, ಅದರ ನಂತರ ಹಕ್ಕುಬಾಧ್ಯತಾ ಸಮಿತಿ ಸಭೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಅಮಾನತುಗೊಂಡ 11 ರಾಜ್ಯಸಭಾ ಸಂಸದರು
1.ಶ್ರೀಮತಿ ಜೆಬಿ ಮಾಥರ್ ಹಿಶಾಮ್
2. ಡಾ.ಎಲ್.ಹನುಮಂತಯ್ಯ
3. ನೀರಜ್ ಡಾಂಗಿ
4. ಶ್ರೀ ರಾಜಮಣಿ ಪಟೇಲ್
5. ಶ್ರೀ ಕುಮಾರ್ ಕೇತ್ಕರ್
6. ಶ್ರೀ ಜಿ.ಸಿ.ಚಂದ್ರಶೇಖರ್
7. ಶ್ರೀ ಬಿನೋಯ್ ವಿಶ್ವಂ
8. ಶ್ರೀ ಸಂದೋಶ್ ಕುಮಾರ್ ಪಿ.
9. ಶ್ರೀ ಎಂ ಮೊಹಮ್ಮದ್ ಅಬ್ದುಲ್ಲಾ
10. ಡಾ.ಜಾನ್ ಬ್ರಿಟ್ಟಾಸ್
11. ಶ್ರೀ ಎ.ಎ.ರಹೀಮ್
ಹಕ್ಕುಚ್ಯುತಿ ನೋಟಿಸ್ ನೀಡಿ ಅಮಾನತುಗೊಂಡ 11 ಮಂದಿಯಲ್ಲಿ ಆರು ಮಂದಿ ಕಾಂಗ್ರೆಸ್ ಪಕ್ಷದವರು, ನಾಲ್ವರು ಎಡಪಕ್ಷಗಳು ಮತ್ತು ಒಬ್ಬರು ಡಿಎಂಕೆಗೆ ಸೇರಿದವರಾಗಿದ್ದಾರೆ.