ಬೆಂಗಳೂರು : ಕನ್ನಡಿಗರ ಹಿತರಕ್ಷಣಾ ಪರೀಕ್ಷೆಯಲ್ಲಿ ಕಾಂಗ್ರೆಸ್ ಫೇಲ್ ಆಗಿದೆ ಎಂದು ಮಾರ್ಕ್ಸ್’ಕಾರ್ಡ್ ಹಂಚಿಕೊಂಡು ಬಿಜೆಪಿ ಟೀಕೆ ಮಾಡಿದೆ.
ಕನ್ನಡಿಗರ ಹಿತರಕ್ಷಣಾ ಪರೀಕ್ಷೆಯಲ್ಲಿಅನುತ್ತೀರ್ಣ (FAIL) ಆಗಿರುವ ಭ್ರಷ್ಟ ಹಾಗೂ ಭಂಡ
ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಕಿಡಿಕಾರಿದೆ. ಭ್ರಷ್ಟ ಸರ್ಕಾರವು ಗುತ್ತಿಗೆದಾರರ ಜೀವ ಹಿಂಡುತ್ತಿದೆ. ಕಾಮಗಾರಿ ಮುಗಿಸಿ ಎರಡು ವರ್ಷವಾದರೂ ಹಲವು ಗುತ್ತಿಗೆದಾರರಿಗೆ ಕಾಂಗ್ರೆಸ್ ಸರ್ಕಾರ ಬಿಲ್ ಪಾವತಿಸಿಲ್ಲ. ಸರ್ಕಾರವು ಗುತ್ತಿಗೆದಾರರ 64,000 ಕೋಟಿ ರೂ. ಬಾಕಿ ಉಳಿಸಿದೆ. ಬಿಲ್ ಪಾವತಿಸದ ಕಾರಣ ಸಾಂಸಾರಿಕ ಜೀವನ ನಡೆಸಲು ಸಾಧ್ಯವಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು, ದಯಾಮರಣಕ್ಕೆ ಅರ್ಜಿ ಸಲ್ಲಿಸುವ ಸನ್ನಿವೇಶಗಳನ್ನುsiddaramaiah ಸರ್ಕಾರವು ಸೃಷ್ಟಿಸಿದೆ. ಖಜಾನೆ ಖಾಲಿ ಮಾಡಿರುವ #ATMSarkara ಗುತ್ತಿಗೆದಾರರಿಂದ ಕಲೆಕ್ಷನ್, ಕಮಿಷನ್ ಸಂಗ್ರಹಿಸಲು ಹೊರಟಿದೆ. ಕಮಿಷನ್ ನೀಡಿದರಷ್ಟೇ ಗುತ್ತಿಗೆದಾರರಿಗೆ ಬಾಕಿ ಬಿಡುಗಡೆಯಾಗುತ್ತಿದೆ. ಇದರಿಂದ ಬೇಸತ್ತ ಗುತ್ತಿಗೆದಾರರು ಹೈಕೋರ್ಟ್ ಪೀಠಗಳಲ್ಲಿ ಸರ್ಕಾರದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಹೊರಟಿದ್ದಾರೆ. ಜೊತೆಗೆ ಮಾರ್ಚ್ 1 ರಿಂದ ರಾಜ್ಯಾದ್ಯಂತ ಸರ್ಕಾರಿ ಕಾಮಗಾರಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. 60% ಮೂಲಕ ಸರ್ಕಾರ ನಡೆಸುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರು ಕಾನೂನು ಸಮರದ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದೆ.
ಕನ್ನಡಿಗರ ಹಿತರಕ್ಷಣಾ ಪರೀಕ್ಷೆಯಲ್ಲಿಅನುತ್ತೀರ್ಣ (FAIL) ಆಗಿರುವ ಭ್ರಷ್ಟ ಹಾಗೂ ಭಂಡ @INCKarnataka ಸರ್ಕಾರ!!#CongressFailsKarnataka pic.twitter.com/O1N6cV7hZD
— BJP Karnataka (@BJP4Karnataka) February 20, 2025
ರಾಜ್ಯ@INCKarnatakaಸರ್ಕಾರದ ಬಳಿ ರಸ್ತೆಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ದುಡ್ಡಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಶ್ರೀ@khargeಅವರು ಹೇಳಿದ್ದು ಅಕ್ಷರಶಃ ನಿಜ. ಸರ್ಕಾರದ ಬೊಕ್ಕಸ ಬರಿದಾಗಿಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಲೇ ಬಂದಿರುವ ಸಿಎಂsiddaramaiah ಸರ್ಕಾರ, ಗುತ್ತಿಗೆದಾರರಿಗೆ 64,000 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಳೆದ 20 ತಿಂಗಳುಗಳಲ್ಲಿ ಈವರೆಗೂ ಒಂದೇ ಒಂದು ಹೊಸ ಕಾಮಗಾರಿಗೂ ಗುದ್ದಲಿ ಪೂಜೆ ಮಾಡಿಲ್ಲ. ಈಗ ಬಿಲ್ ಬಾಕಿ ಪಾವತಿ ಮಾಡದಿದ್ದರೆ ಜಾರಿಯಲ್ಲಿರುವ ಕಾಮಗಾರಿಗಳೂ ನಿಲ್ಲುತ್ತವೆ. ಸರ್ಕಾರದ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗುತ್ತವೆ. ಸಿಎಂ @siddaramaiah ನವರೇ, ತಮ್ಮ ಅಧಿಕಾರದ ದುರಾಸೆಗೆ ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನ ಯಾವ ದುಸ್ಥಿತಿಗೆ ತಂದಿಟ್ಟಿದ್ದೀರಿ ನೋಡಿ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡವಿ 16 ಬಜೆಟ್ ಮಂಡಿಸುವ ದಾಖಲೆ ಬರೆದರೇನು, ಎರಡೆರಡು ಬಾರಿ ಮುಖ್ಯಮಂತ್ರಿ ಆದರೇನು? ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಸಿಎಂ ಎಂದೇ ಇತಿಹಾಸ ತಮ್ಮನ್ನ ನೆನಪಿಡುವುದು ಎಂದು BJP ಕಿಡಿಕಾರಿದೆ.