ಬೆಂಗಳೂರು : ಇಇಡಿಎಸ್ ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮಾಹಿತಿಯನ್ನು ಇಂದೀಕರಣಕ್ಕೆ ಸಂಬಂಧಿಸಿದಂತೆ, ಉಲ್ಲೇಖ-1ರಲ್ಲಿ ಕ್ರಸಂ 1 ರಿಂದ 19 ರವರೆಗಿನ ಅಂಶಗಳನ್ನು ಒಳಗೊಂಡಿರುವ ನಿಖರವಾದ ಸೇವಾ ವಿವರಗಳನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸುವ ಬಗ್ಗೆ ಆಯಾ ಬಟವಾಡ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಮುಂದುವರೆದು ಉಲ್ಲೇಖ-2ರಲ್ಲಿ ಜೂಮ್ ಸಭೆಯಲ್ಲಿ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸುವ ಬಗ್ಗೆ ಸಭೆ ಕೈಗೊಂಡು ಸದರಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ. ಆದರೆ, ಇದುವರೆವಿಗೂ ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವ 19 ಅಂಶಗಳನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸಿಲ್ಲದಿರುವುದು ಕಂಡುಬಂದಿರುತ್ತದೆ.
ಈ ಸಂಬಂಧ ಉಲ್ಲೇಖಿತ ಪತ್ರಗಳ ಸೂಚನೆಗಳನ್ವಯ ಇಲಾಖೆಯ ಬಟವಾಡೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ/ಅಧಿಕಾರಿಗಳ/ಸಿಬ್ಬಂದಿ ವರ್ಗದವರ ಸೇವಾವಹಿಗಳನ್ನು ಪರಿಶೀಲಿಸಿ ನಿಖರ ಮಾಹಿತಿಯನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ದಿನಾಂಕ: 29/01/2025 ರೊಳಗೆ ಇಂದೀಕರಿಸಿ ಅಂತಿಮಗೊಳಿಸಿರುವ ಬಗ್ಗೆ ತಮ್ಮ ಲಾಗಿನ್ ನಲ್ಲಿ ಅಧಿಕಾರಿಗಳೇ ಖುದ್ದು ಪರಿಶೀಲಿಸಿ ಖಚಿತಪಡಿಸಲು ಮತ್ತೊಮ್ಮೆ ಸೂಚಿಸಿದೆ.