ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಈ ತಿಂಗಳ ಅಂತ್ಯದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಒಂದು ಕಪ್ ಕಾಫಿಗೆ ನೀವು ಹೆಚ್ಚು ಪಾವತಿಸಬೇಕಾಗಬಹುದು. ಏಕೆಂದರೆ, ಕಾಫಿ ಪುಡಿಯ ಬೆಲೆಗಳು ಹೆಚ್ಚಾಗಿದೆ. ಮೂಲಗಳ ಪ್ರಕಾರ ಒಂದು ಕಪ್ ಕಾಫಿಗೆ 5.ರೂ ಹೆಚ್ಚಳವಾಗುವ ಸಾಧ್ಯತೆಯಿದೆ.
ರೋಸ್ಟರ್ ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿಯ ಬೆಲೆ ಫೆಬ್ರವರಿ ಅಂತ್ಯದ ವೇಳೆಗೆ ಕೆಜಿಗೆ 100 ರೂಗಳಷ್ಟು ಹೆಚ್ಚಾಗಲಿದೆ. ಮೂಲಗಳ ಪ್ರಕಾರ ಹೋಟೆಲ್ಗಳು ಮತ್ತು ಕೆಫೆಗಳು ಕಾಫಿ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ.
ಕಾಫಿ ಪುಡಿಯ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಅರೇಬಿಕಾ ಮತ್ತು ರೋಬಸ್ಟಾ ಕಾಫಿಯ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೋಟೆಲ್, ಕೆಫೆ ಮಾಲೀಕರು ಹೇಳಿದ್ದಾರೆ.