ಬೆಂಗಳೂರು : ನಾಳೆ ಸಂಜೆ 5 ಗಂಟೆಗೆ ‘ಬೆಂಗಳೂರು ಹಬ್ಬʼ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಅವರು ನಮ್ಮ ಜಾತ್ರೆ ಮೆರವಣಿಗೆಗೆ ಹಸಿರು ನಿಶಾನೆ ತೋರಿಸುವ ಮೂಲಕ ʼಬೆಂಗಳೂರು ಹಬ್ಬʼವನ್ನು ಉದ್ಘಾಟಿಸಲಿದ್ದಾರೆ. ನಾಳೆ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ನಡೆಯುವ ಈ ಐತಿಹಾಸಿಕ ಕ್ಷಣಕ್ಕೆ ತಮ್ಮೆಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.ಬನ್ನಿ, ನಮ್ಮ ಹೆಮ್ಮೆಯ ಕರುನಾಡಿನ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಭವ್ಯ ಪರಂಪರೆಗಳ ವೈಭವಪೂರ್ಣ ಉತ್ಸವದಲ್ಲಿ ಭಾಗವಹಿಸಿ, ಸೊಬಗನ್ನು ಕಣ್ತುಂಬಿಕೊಳ್ಳೋಣ ಎಂದು ಪ್ರಕಟಣೆ ಹೊರಡಿಸಿದೆ.
ಕಾರ್ಯಕ್ರಮದ ವಿಶೇಷತೆ
*ಕರ್ನಾಟಕದ ಎಲ್ಲಾ ಪ್ರದೇಶಗಳನ್ನು ಪ್ರತಿನಿಧಿಸುವ 500 ಜನಪದ ಕಲಾವಿದರುಳ್ಳ ಸುಮಾರು 50 ವಿವಿಧ ಜನಪದ ಕಲಾತಂಡಗಳ ಭಾಗವಹಿಸಲಿದೆ.
*ವಿವಿಧ ಕಲಾವಿದರು, ಎತ್ತಿನಗಾಡಿಗಳು, ನೃತ್ಯಗಾರರು, ಗಾಯಕರು ಮತ್ತು ಸ್ತಬ್ದಚಿತ್ರಗಳಿಂದ ಕೂಡಿದ ವರ್ಣರಂಜಿತ ಬೃಹತ್ ಮೆರವಣಿಗೆ.
*ಕರ್ನಾಟಕದ 8 ಜನ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಸ್ತಬ್ಧಚಿತ್ರಗಳಿಗೆ ಪುಷ್ಪಾರ್ಚನೆ.
ಮೆರವಣಿಗೆಯು ವಿಧಾನಸೌಧದಿಂದ ಆರಂಭವಾಗಿ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣದ ರಂಗೋಲಿ ಕಲಾಕೇಂದ್ರವನ್ನು ತಲುಪಲಿದೆ.
ರಾತ್ರಿ 10.00 ಗಂಟೆಯವರೆಗೆ ಮಹಾತ್ಮ ಗಾಂಧಿ ರಸ್ತೆಯರಂಗೋಲಿ ಕಲಾಕೇಂದ್ರದಲ್ಲಿ ಜನಪದ ಕಲಾತಂಡೆಗಳ ಪ್ರದರ್ಶನ ನಡೆಯಲಿದೆ .
ಸ್ಥಳ: ವಿಧಾನಸೌಧ ಮತ್ತು ಮಹಾತ್ಮ ಗಾಂಧಿ ರಸ್ತೆ
ದಿನಾಂಕ: 30ನೇ ನವೆಂಬರ್ 2024
ಸಮಯ: ಸಂಜೆ 5.00 ಗಂಟೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಮ್ಮ ಜಾತ್ರೆ ಮೆರವಣಿಗೆಗೆ ಹಸಿರು ನಿಶಾನೆ ತೋರಿಸುವ ಮೂಲಕ ʼಬೆಂಗಳೂರು ಹಬ್ಬʼವನ್ನು ಉದ್ಘಾಟಿಸಲಿದ್ದಾರೆ. ನಾಳೆ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ನಡೆಯುವ ಈ ಐತಿಹಾಸಿಕ ಕ್ಷಣಕ್ಕೆ ತಮ್ಮೆಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.
ಬನ್ನಿ, ನಮ್ಮ ಹೆಮ್ಮೆಯ ಕರುನಾಡಿನ ಶ್ರೀಮಂತ ಕಲೆ,… pic.twitter.com/D8oFwuQmA3
— DIPR Karnataka (@KarnatakaVarthe) November 29, 2024