![](https://kannadadunia.com/wp-content/uploads/2021/04/Vidhana_Soudha_750_1.gif)
ಬೆಂಗಳೂರು : ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತೆ ಶಿಶುಪಾಲನೆ ರಜೆ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರಗಳ ಕಡೆ ಗಮನ -ಸೆಳೆಯಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ನೀಡಲಾದ ಶಿಶುಪಾಲನೆ ರಜೆ ಸೌಲಭ್ಯವನ್ನು ಅನುದಾನಿತ ಪ್ರೌಢಶಾಲಾ ಮಹಿಳಾ ನೌಕರರಿಗೂ ವಿಸ್ತರಿಸುವ ಕುರಿತಂತೆ. ಸದರಿ ಸೌಲಭ್ಯವನ್ನು ವಿಸ್ತರಿಸಿದಲ್ಲಿ ಆಡಳಿತಾತ್ಮಕವಾಗಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ, ತೊಂದರೆಯಾಗದಂತೆ ರಜೆ ಸೌಲಭ್ಯವನ್ನು ವಿಸ್ತರಿಸಲು ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೇ ಸ್ವಂತ ಸಂಪನ್ಮೂಲದಿಂದಲೇ ಒದಗಿಸಿಕೊಂಡು ಅನುದಾನಿತ ಶಾಲಾ ಮಹಿಳಾ ನೌಕರರಿಗೆ ಶಿಶುಪಾಲನೆ ರಜೆ ಮಂಜೂರು ಮಾಡುವ ಬಗ್ಗೆ, ಕ್ರಮವಹಿಸುವಂತೆ ತಿಳಿಸಲು ನಿರ್ದೇಶಿಸಲಾಗಿದೆ.