ನವದೆಹಲಿ : ಪುರುಷನನ್ನು ‘ಬೋಳ, ಅಥವಾ ಬಾಂಡ್ಲಿ ಎಂದು’ ಕರೆಯುವುದನ್ನು ಕೂಡ ಲೈಂಗಿಕ ಕಿರುಕುಳ ಎಂದು ಪರಿಗಣಿಸಬಹುದು ಎಂದು ಇಂಗ್ಲೆಂಡ್ ನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೋಳು ಎಂಬ ಪದ ಮತ್ತು ಲೈಂಗಿಕತೆಯ ಸಂರಕ್ಷಿತ ಗುಣಲಕ್ಷಣಗಳ ನಡುವೆ ಸಂಬಂಧವಿದೆ ಎಂದು ತೀರ್ಪು ಹೇಳಿದೆ, ಇದು “ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಪ್ರಚಲಿತವಾಗಿದೆ” ಎಂದು ಉಲ್ಲೇಖಿಸಿದೆ.
ಬ್ರಿಟನ್ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ತಲೆ ಬೋಳು ಆಗಿತ್ತು. ಇದನ್ನು ಅವರ ಬಾಸ್ ತಮಾಷೆ ಮಾಡಿದ್ದರು. ಅಲ್ಲದೇ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರಿಂದ ಬೇಸರಗೊಂಡ ಆ ವ್ಯಕ್ತಿ ಪ್ರಕರಣವನ್ನು ಕೋರ್ಟ್ ಮೆಟ್ಟಿಲೇರಿದ್ದರು. ನಂತರ ಆ ವ್ಯಕ್ತಿಯ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ , ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ. ಹೀಗೆ ಯಾವತ್ತೂ ಬೋಳು ತಲೆಯ ಬಗ್ಗೆ ತಮಾಷೆ ಮಾಡಬೇಡಿ ಎಂದು ಎಂದು ಬಾಸ್ಗೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಪುರುಷರನ್ನು ಬೋಳ ಎಂದು ಕರೆಯುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಕೋರ್ಟ್ ತೀರ್ಪು ನೀಡಿದೆ