alex Certify BIG NEWS: BSYಗೆ ಪ್ರಧಾನಿ ಮೋದಿ ಅಪಮಾನ; ಹಿರಿಯ ನಾಯಕರನ್ನು ಕಸದ ಬುಟ್ಟಿಗೆ ಹಾಕಿದ್ದಾರೆ; ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೃದುಧೋರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BSYಗೆ ಪ್ರಧಾನಿ ಮೋದಿ ಅಪಮಾನ; ಹಿರಿಯ ನಾಯಕರನ್ನು ಕಸದ ಬುಟ್ಟಿಗೆ ಹಾಕಿದ್ದಾರೆ; ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೃದುಧೋರಣೆ

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೃದುಧೋರಣೆ ತಳೆದಿದ್ದು, ಪ್ರಧಾನಿ ಮೋದಿ ಯಡಿಯೂರಪ್ಪನವರಿಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದೆ.

ಬಿ.ಎಸ್.ಯಡಿಯೂರಪ್ಪನವರಿಗೆ ಒತ್ತಡ ಹೇರಿ, ಚಿತ್ರಹಿಂಸೆ ಮೂಲಕ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ದೆಹಲಿಯ ನಿರಂಕುಶಾಧಿಕಾರಿ ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಮಾಡುತ್ತಾರೆ ಹೊರತು ಬಿಜೆಪಿ ಶಾಸಕರು ಸಿಎಂ ಆಯ್ಕೆ ಮಾಡುತ್ತಿಲ್ಲ. ಹಿರಿಯ ನಾಯಕರನ್ನು ಮೋದಿ ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಅಪಮಾನ ಮಾಡುವುದು ಪ್ರಧಾನಿ ಮೋದಿ ಹಾಗೂ ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಎಲ್.ಕೆ.ಅಡ್ವಾಣಿಯಿಂದ ಹಿಡಿದು ಬಿ ಎಸ್ ವೈ ವರೆಗೂ ಅವಮಾನ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಕೊರೊನಾ 3ನೇ ಅಲೆ ಭಯ: ಇಂಡೋನೇಷ್ಯಾದಲ್ಲಿ ಒಂದೇ ವಾರ 100 ಮಕ್ಕಳ ಸಾವು

ಮೋದಿಯಿಂದ ಸಂತ್ರಸ್ತರಾದವರ ಪಟ್ಟಿ ದೊಡ್ದದಿದೆ. ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ, ಕೆಶುಭಾಯ್ ಪಟೇಲ್, ಶಾಂತಾಕುಮಾರ್, ಯಶವಂತ ಸಿನ್ಹಾ ಸೇರಿ ಹಲವರಿಗೆ ನಿವೃತ್ತಿ ಕೊಡಿಸಿದರು. ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್, ಉಮಾಭಾರತಿ, ಸಿ.ಪಿ.ಠಾಕೂರ್, ಎ.ಕೆ.ಪಟೇಲ್, ಹರೇನ್ ಪಾಂಡ್ಯ, ಕಲ್ಯಾಣ್ ಸಿಂಗ್, ಡಾ.ಹರ್ಷವರ್ಧನ್, ರವಿಶಂಕರ್ ಪ್ರಸಾದ್, ಸುಶೀಲ್ ಮೋದಿ ಈಗ ಬಿ ಎಸ್ ಯಡಿಯೂರಪ್ಪ ಹೀಗೆ ಎಲ್ಲರೂ ಬಲವಂತದಿಂದ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಬಿಜೆಪಿ ನಾಯಕರ ಇಂತಹ ನಡೆ ಸರಿಯಲ್ಲ ಎಂದು ಟೀಕಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...