ಕೊಪ್ಪಳ: ಬಿಜೆಪಿ ಕೇವಲ ವ್ಯವಹಾರ ನಡೆಸಲೆಂದು ಅಧಿಕಾರಕ್ಕೆ ಬರುತ್ತೆ. ಬಂದು ದೇಶ ಲೂಟಿ ಮಾಡಿ ಹಾಳು ಮಾಡಿ ಹೋಗುತ್ತೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIG NEWS: ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ; ಮತ್ತೊಮ್ಮೆ ಸುಳಿವು ನೀಡಿದ ಸಿಎಂ ಯಡಿಯೂರಪ್ಪ
ಕೊಪ್ಪಳದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಬಿಜೆಪಿಯವರು ವ್ಯವಹಾರಕ್ಕಾಗಿ ಬರುತ್ತಾರೆ. ವ್ಯವಹಾರ ಮಾಡಿ ಕುದುರದೇ ಹೋದರೆ ಸರ್ಕಾರ ಬಿದ್ದು ಹೋಗುತ್ತೆ. ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ. ಆ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇದು ರಾಜ್ಯದ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.