ಬೆಳಗಾವಿ : ಕೆಪಿಎಸ್ ಸಿ ಸೇರಿ ಸರ್ಕಾರಿ ಪರೀಕ್ಷೆಗಳಲ್ಲಿ ನಕಲು, ಓಎಂಆರ್ ಶೀಟ್ ತಿದ್ದುಪಡಿ ಇತ್ಯಾದಿಗಳನ್ನು ತಡೆಗಟ್ಟಲು ಕಠಿಣ ಕಾಯ್ದೆಯನ್ನು ರಾಜ್ಯ ಸರ್ಕಾರ ರೂಪಿಸಿದ್ದು, ಕರ್ನಾಟಕ ಸಾರ್ವಜನಿಕ ಪರೀಕ್ಷೆ ವಿಧೇಯಕ ಮಂಡಿಸಿದೆ.
ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲಿನ ಭ್ರಷ್ಟಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕವನ್ನು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಈ ಕಾಯ್ದೆಯನ್ವಯ ತಪ್ಪತಸ್ಥರಿಗೆ 5-12 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 15 ಲಕ್ಷದಿಂದ 10 ಕೋಟಿ ರೂ.ವರೆಗೆ ದಂಡ ಶಿಕ್ಷೆಯಾಗಲಿದೆ.
ರಾಜ್ಯದಲ್ಲಿ 545ಪಿಎಸ್ ಐ ಹುದ್ದೆಗಳ ನೇಮಕಾತಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷಗಳಲ್ಲಿ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಮಸೂದೆಯನ್ನು ಜಾರಿಗೆ ತರಲಾಗಿದೆ.