ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಆಟ ಆಡುವಾಗ ಸ್ಪರ್ಧಿ ‘ಗೋಲ್ಡ್ ಸುರೇಶ್’ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವ ಸಂದರ್ಭದಲ್ಲಿ ಗೋಲ್ಡ್ ಸುರೇಶ್ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಆಟದ ವೇಳೆ ಗೋಲ್ಡ್ ಸುರೇಶ್ ಮೇಲೆ ಆಕಸ್ಮಿಕವಾಗಿ ನೀರು ತುಂಬಿದ ಡ್ರಂ ಬಿದ್ದು ಅವಘಡ ನಡೆದಿದೆ. ನನ್ನ ಕಾಲು ಹೋಯಿತು ಎಂದು ಸುರೇಶ್ ಕೂಗಿಕೊಂಡಿದ್ದಾರೆ, ಸುರೇಶ್ ಗೆ ಏನೋ ಆಯಿತು ಎಂದು ಉಳಿದವರು ಕೂಗಿಕೊಂಡಿದ್ದಾರೆ. ಸದ್ಯ ಸುರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.