ಬೆಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕ ಗ್ರಾಮದ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ಗ್ರಾಮದಲ್ಲಿ ನಡೆದಿದೆ.
ಮೊದಲಿಗೆ ದಂಪತಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಹಾಗೂ ಗಂಡನೇ ಹೆಂಡತಿ, ಇಬ್ಬರು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿತ್ತು.. ಆದರೆ ನಡೆದಿದ್ದೇ ಬೇರೆ..!
ಘಟನೆ ಹಿನ್ನೆಲೆ
ಕಲಬುರಗಿ ಮೂಲದ ಅವಿನಾಶ್ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. ಅವಿನಾಶ್ ಹಾಗೂ ಪತ್ನಿ, ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿತ್ತು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್ ಮನೆಯಲ್ಲಿ ಹಣದ ಸಮಸ್ಯೆಯಿತ್ತು. ಸಾಲ ಸೂಲ ಮಾಡಿಕೊಂಡ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.
ಈ ವಿಚಾರಕ್ಕೆ ಮನನೊಂದ ಪತ್ನಿ ಮಮತಾ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಗಂಡ ಅವಿನಾಶ್ ಕೆಲಸಕ್ಕೆ ಹೋದ ಬಳಿಕ ಮಮತಾ ತನ್ನ ಇಬ್ಬರು ಮಕ್ಕಳನ್ನು ನೇಣು ಬಿಗಿದುಕೊಂದು ತಾನೂ ಕೂಡ ನೇಣಿಗೆ ಶರಣಾಗಿದ್ದಾರೆ.
ನಂತರ ಸಂಜೆ ಅವಿನಾಶ್ ಹಲವು ಬಾರಿ ಕರೆ ಮಾಡಿದರೂ ಕೂಡ ರಿಸೀವ್ ಮಾಡಿಲ್ಲ.. ! ಇದರಿಂದ ಆತಂಗೊಂಡ ಅವಿನಾಶ್ ಪಕ್ಕದವರ ಮನೆಗೆ ಕರೆ ಮಾಡಿ ತನ್ನ ಹೆಂಡತಿಗೆ ಫೋನ್ ನೀಡುವಂತೆ ಕೇಳಿದ್ದಾನೆ. ಅವರು ಬಂದು ಬಾಗಿಲು ಬಡಿದರೂ ಬಾಗಿಲು ತೆಗೆದಿಲ್ಲ.. ಅವರು ಮನೆಯಲ್ಲಿ ಇಲ್ಲ.. ಎಲ್ಲೋ ಹೋಗಿದ್ದಾರೆ ಎಂದು ಸುಮ್ಮನಾಗಿದ್ದಾರೆ.
ರಾತ್ರಿ ಮನೆಗೆ ಬಂದ ಅವಿನಾಶ್ ತನ್ನ ಬಳಿ ಇದ್ದ ಇನ್ನೊಂದು ಕೀ ಇಂದ ಬಾಗಿಲು ತೆಗೆದು ನೋಡಿ ಶಾಕ್ ಆಗುತ್ತಾನೆ. ಇಬ್ಬರು ಮಕ್ಕಳು ಹಾಗೂ ಹೆಂಡತಿ ಶವವಾಗಿ ಬಿದ್ದಿರುತ್ತಾರೆ. ಇದನ್ನು ನೋಡಿದ ಅವಿನಾಶ್, ಪತ್ನಿಯನ್ನು ಕೆಳಗಿಳಿಸಿ ಅದೇ ಹಗ್ಗಕ್ಕೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..ಆರ್ಥಿಕ ಸಂಕಷ್ಟದಿಂದ ಮನನೊಂದು ಇಡೀ ಕುಟುಂಬ ಸಾವಿಗೆ ಶರಣಾಗಿರುವುದು ದುರಂತವೇ ಹೌದು.