ಬೆಂಗಳೂರು : ರಾಜ್ಯದ ಉದ್ಯೋಗಿಗಳಿಗೆ ಬಿಗ್ ಶಾಕ್ ಎಂಬಂತೆ ವೃತ್ತಿಪರ ತೆರಿಗೆ (Professional tax) 100 ರೂ ಹೆಚ್ಚಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ವೃತ್ತಿಪರ ಉದ್ಯೋಗಿಗಳ ಮೇಲೆ ಹೊರೆ ಹಾಕುವ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ (ತಿದ್ದುಪಡಿ) ವಿಧೇಯಕ-2025′ ಅನುಮೋದನೆ ನೀಡಲಾಗಿದೆ.
ವಿಧೇಯಕದ ಪ್ರಕಾರ ವೃತ್ತಿಪರ ತೆರಿಗೆ (Professional tax)ನ್ನು 300 ರೂ.ಗೆ ಏರಿಕೆ ಮಾಡಲಾಗುತ್ತದೆ. ಸದ್ಯ ವೃತ್ತಿಪರ ಉದ್ಯೋಗಿಗಳಿಗೆ ಮಾಸಿಕ ವೇತನದಲ್ಲಿ 200 ರೂ. Professional tax ವಿಧಿಸಲಾಗುತ್ತಿದೆ. ಈ ತಿದ್ದುಪಡಿ ವಿಧೇಯಕದಂತೆ ತೆರಿಗೆಯನ್ನು 100 ರೂ.ರಷ್ಟು ಹೆಚ್ಚಿಸಲಾಗುವುದು. ಆ ಮೂಲಕ ಪ್ರೊಫೆಷನಲ್ ತೆರಿಗೆ 300 ರೂ.ಗೆ ಏರಿಕೆಯಾಗಲಿದೆ. ಇದೇ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಂಡಿಸುವ ಸಾಧ್ಯತೆಯಿದೆ.