ಬೆಂಗಳೂರು : ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಜ.20 ರಿಂದ ಬಿಯರ್ ದರ 10-50 ರೂ ಏರಿಕೆಯಾಗಲಿದೆ.
ಹೌದು, ರಾಜ್ಯ ಸರ್ಕಾರ ಬಿಯರ್ ಮೇಲಿನ ಸುಂಕವನ್ನು ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದ್ದು, ಜನವರಿ 20 ರಿಂದ ಜಾರಿಯಾಗಲಿದೆ.ಸುಂಕ ಪ್ರಮಾಣ ಏರಿಕೆಯ ಆಧಾರದಲ್ಲಿ ಕೆಲವು ಪ್ರೀಮಿಯಂ ಬಿಯರ್ ಗಳ ಚಿಲ್ಲರೆ ಮಾರಾಟದಲ್ಲಿ 10 ರಿಂದ 50 ರೂವರೆಗೆ ಏರಿಕೆಯಾಗಲಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಉದ್ದೇಶಿತ ಮದ್ಯದ ಬೆಲೆ ಪರಿಷ್ಕರಣೆಯು ಭಾರತೀಯ ನಿರ್ಮಿತ ಮದ್ಯ ಮಾರಾಟ ಮತ್ತು ಅಬಕಾರಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ರಾಜ್ಯ ಸರ್ಕಾರವು ಬಿಯರ್ ಬೆಲೆಯನ್ನು ಹೆಚ್ಚಿಸಿದ್ದು, ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಕಿಕ್ ಏರಲಿದೆ.
ಯಾವುದಕ್ಕೆ ಎಷ್ಟು..? ( ಹೊಸ ದರ)
ಕೆಎಫ್ 190
ಕೆಎಫ್ ಸ್ಟ್ರಾಂಗ್ 195
ಹಂಟರ್ 190
ಅಲ್ಟ್ರಾ 225
ಅಲ್ಟ್ರಾ (ಮ್ಯಾಕ್ಸ್) 240
ಬುಲೆಟ್ 150
ಬ್ಲಾಕ್ ಪೋರ್ಟ್ 160
ಪವರ್ ಕೂಲ್ 155