alex Certify BIG NEWS : ನಿವೃತ್ತ ಸರ್ಕಾರಿ ಸಿಬ್ಬಂದಿಗಳಿಗೆ ಬಿಗ್ ರಿಲೀಫ್ : ಕಾಲಮಿತಿ ಬಳಿಕ ಕ್ರಿಮಿನಲ್, ಸಿವಿಲ್ ಮೊಕದ್ದಮೆ ಹೂಡುವಂತಿಲ್ಲ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ನಿವೃತ್ತ ಸರ್ಕಾರಿ ಸಿಬ್ಬಂದಿಗಳಿಗೆ ಬಿಗ್ ರಿಲೀಫ್ : ಕಾಲಮಿತಿ ಬಳಿಕ ಕ್ರಿಮಿನಲ್, ಸಿವಿಲ್ ಮೊಕದ್ದಮೆ ಹೂಡುವಂತಿಲ್ಲ!

ಬೆಂಗಳೂರು : ನಿವೃತ್ತ ಸರ್ಕಾರಿ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಬಿಗ್‌ ರಿಲೀಫ್‌ ನೀಡಿದ್ದು, ಕಾಲಮಿತಿ ಬಳಿಕ ಕ್ರಿಮಿನಲ್‌, ಸಿವಿಲ್‌ ಮೊಕದ್ದಮೆ ಹೂಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಸರ್ಕಾರಿ ಸೇವೆಯಲ್ಲಿದ್ದಾಗ ಎಸಗಿದ ಕರ್ತವ್ಯಲೋಪ, ದುರ್ನಡತೆ ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣಗಳಲ್ಲಿ ಕ್ರಮಿನಲ್‌ ಕೇಸ್‌ ಎದುರಿಸಬೇಕಾದ ಸಂಕಷ್ಟದಿಂದ ನಿವೃತ್ತ ಸರ್ಕಾರಿ ನೌಕರರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.

ನಿವೃತ್ತಿಯಾಗುವ ಮುನ್ನ ಸಂಬಂಧ ಪಟ್ಟ ನೌಕರನ ವಿರುದ್ಧ ಇಲಾಖಾ ವಿಚಾರಣೆ ಅಥವಾ ನ್ಯಾಯಾಂಗ ವಿಚಾರಣೆ ಪ್ರಕ್ರಿಯೆ ಹೂಡಿರದಿದ್ದರೆ ನಿವೃತ್ತಿ ನಂತರ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವ ಹಾಗೂ ಸರ್ಕಾರಕ್ಕೆ ಉಂಟು ಮಾಡಿದ ಆರ್ಥಿಕ ನಷ್ಟವನ್ನು ಅವರ ಪಿಂಚಣಿಯೇತರ ಆಸ್ತಿಯಿಂದ ವಸೂಲಿ ಮಾಡಲು ಸಿವಿಲ್‌ ಮೊಕದ್ದಮೆ ಪ್ರಸ್ತಾವನೆಗಳನ್ನು ಕೈಬಿಡಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಈ ಕಾಲಮಿತಿಯ ಉದ್ದೇಶವು ಸರ್ಕಾರಿ ನೌಕರರು ನಿವೃತ್ತರಾದ ಬಹುಕಾಲದ ನಂತರ ಅವರ ಮೇಲೆ ಇಲಾಖಾ ವಿಚಾರಣೆ ಅಥವಾ ನ್ಯಾಯಾಂಗ ವ್ಯವಹರಣೆಯನ್ನು ಹೂಡುವುದು ನೈಸರ್ಗಿಕ ನ್ಯಾಯದ ತತ್ವಕ್ಕೆ ವ್ಯತಿರಿಕ್ತವಾಗುವುದಲ್ಲದೆ ಇದರಿಂದ ಅವರು ಎದುರಿಸಬೇಕಾಗುವ ಮಾನಸಿಕ ಮತ್ತು ಆರ್ಥಿಕ ತೊಂದರೆಗಳಿಂದ ಅವರನ್ನು ರಕ್ಷಿಸುವುದಾಗಿದೆ. ಆದಾಗ್ಯೂ, ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ತಪ್ಪಿತಸ್ಥರಿಂದ ಭರಿಸಿಕೊಳ್ಳುವ ತನ್ನ ಅಧಿಕಾರವನ್ನು ಅಥವಾ ತಪ್ಪಿತಸ್ಥ ಸರ್ಕಾರಿ ನೌಕರರು ನಿವೃತ್ತಿ ಹೊಂದಿರುವ ಕಾರಣಕ್ಕೆ ಮಾತ್ರ ಅವರು ಸೇವೆಯಲ್ಲಿದ್ದಾಗ ಎಸಗಿದ್ದ ಘೋರ ದುರ್ನಡತೆಗೆ ಅವರ ವಿರುದ್ಧ ಕಾನೂನಿನ ರೀತ್ಯಾ ಶಿಕ್ಷೆಯನ್ನು ವಿಧಿಸಲು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ನಡೆಸುವ ಸರ್ಕಾರದ ಜವಾಬ್ದಾರಿಯನ್ನು ಈ ಕಾಲಮಿತಿಯಿಂದಾಗಿ ಸರ್ಕಾರವು ಕೈಬಿಟ್ಟಿದೆಯೆಂದು ಭಾವಿಸತಕ್ಕದ್ದಲ್ಲ.

ಮೇಲೆ ತಿಳಿಸಿದ ನಿಯಮ 214 ರಲ್ಲಿನ ಅವಕಾಶಗಳು ಮೂಲತಃ ನಿವೃತ್ತ ಸರ್ಕಾರಿ ನೌಕರನ ಪಿಂಚಣಿಯನ್ನು ಹಿಂಪಡೆಯಲು ಅಥವಾ ತಡೆಹಿಡಿಯಲು ಸರ್ಕಾರ ಹೊಂದಿರುವ ವಿವೇಚನಾತ್ಮಕ ಅಧಿಕಾರಕ್ಕೆ ಸಂಬಂಧಿಸಿರುವುದು ಗಮನಾರ್ಹವಾಗಿರುತ್ತದೆ.

ನಿಯಮ 214 ರ ಉಪನಿಯಮ (3) ರಲ್ಲಿ ವಿಧಿಸಲಾದ ನಾಲ್ಕು ವರ್ಷಗಳ ಕಾಲಮಿತಿ ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಹೂಡಿದ ಇಲಾಖಾ ವಿಚಾರಣೆ ಅಥವಾ ನ್ಯಾಯಾಂಗ ವ್ಯವಹರಣೆಗಳು ಮತ್ತು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಅದೇ ನಿಯಮದಡಿಯಲ್ಲಿ ಮುಂದುವರೆದಿದೆ ಎನ್ನಲಾದ ಅಂತಹ ವ್ಯವಹರಣೆಯಲ್ಲಿ ಅತನು ದೋಷಿಯೆಂದು ಸಾಬೀತಾದಲ್ಲಿ ಅತನ ಪಿಂಚಣಿಯನ್ನು ಹಿಂಪಡೆಯುವ ಅಥವಾ ತಡೆಹಿಡಿಯುವ ಕ್ರಮದ ಮೇಲೆ ಪರಿಣಾಮ ಬೀರುತ್ತದೆ.

ಅಂತಹ ವ್ಯವಹರಣೆಯ ಫಲಿತಾಂಶವಾಗಿ ಅವನು ಸರ್ಕಾರಕ್ಕೆ ಉಂಟುಮಾಡಿದ ನಷ್ಟವನ್ನು ಆತನ ಪಿಂಚಣಿಯೇತರ ಆಸ್ತಿಗಳಿಂದ ಸಿವಿಲ್‌ ಮೊಕದ್ದಮೆಯನ್ನು ಹೂಡುವ ಮೂಲಕ ವಸೂಲು ಮಾಡುವ ಕ್ರಮದ ಮೇಲಾಗಲೀ ಅಥವಾ ಸೇವೆಯಲ್ಲಿದ್ದಾಗ ಅಥವಾ ಮರುನೇಮಕಾತಿ ಅವಧಿಯಲ್ಲಿ ಆತನು ಎಸಗಿದ ದುರ್ನಡತೆ ಅಥವಾ ಕರ್ತವ್ಯ ನಿರ್ಲಕ್ಷತೆಯ ಅಪರಾಧಕ್ಕಾಗಿ ಭಾರತೀಯ ದಂಡ ಸಂಹಿತೆಯನ್ವಯ ಆತನ ಮೇಲೆ ಕ್ರಿಮಿನಲ್ ವ್ಯವಹರಣೆಯಲ್ಲಿ ಶಿಕ್ಷೆಯನ್ನು ವಿಧಿಸುವ ಕ್ರಮದ ಮೇಲೆ ಈ ಕಾಲಮಿತಿಯು ಪರಿಣಾಮ ಬೀರುವುದಿಲ್ಲ. ಆದುದರಿಂದ, ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಅಥವಾ ಮರುನೇಮಕಾತಿ ಅವಧಿಯಲ್ಲಿ ಎಸಗಿದ ದುರ್ನಡತೆ ಅಥವಾ ಕರ್ತವ್ಯ ನಿರ್ಲಕ್ಷತೆಯ ಅಪರಾಧಕ್ಕಾಗಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ನಡೆಸುವಲ್ಲಿ ಅಥವಾ ಅವರು ಸರ್ಕಾರಕ್ಕೆ ಉಂಟುಮಾಡಿದ ಆರ್ಥಿಕ ನಷ್ಟವನ್ನು ಅವರ ಪಿಂಚಣಿಯೇತರ ಆಸ್ತಿಯಿಂದ ವಸೂಲು ಮಾಡಲು ಅಂತಹ ನೌಕರರ ಮೇಲೆ ಸಿವಿಲ್ ವ್ಯವಹರಣೆಯನ್ನು ಹೂಡುವಲ್ಲಿ ನಿಯಮ 214(3) ರಲ್ಲಿ ತಿಳಿಸಿದ ಕಾಲಮಿತಿಯ ನಿರ್ಬಂಧ ಅನ್ವಯಿಸುವುದಿಲ್ಲ. ಅಂತಹ ವ್ಯವಹರಣೆಗಳನ್ನು ಹೂಡುವಲ್ಲಿ ತತ್ಸಂಬಂಧ ಕಾಯ್ದೆಗಳಲ್ಲಿ ತಿಳಿಸಿರುವ ಕಾಲಮಿತಿ ಅನ್ವಯವಾಗುತ್ತದೆ.

ಈ ಮೇಲಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಆಡಳಿತ ಇಲಾಖೆಗಳು ಸೇವೆಯಿಂದ ನಿವೃತ್ತಿ ಹೊಂದಿರುವ ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವ ಪ್ರಸ್ತಾವನೆಗಳನ್ನು ಅಥವಾ ಅವರು ಸರ್ಕಾರಕ್ಕೆ ಉಂಟುಮಾಡಿದ ಆರ್ಥಿಕ ನಷ್ಟವನ್ನು ಅವರ ಪಿಂಚಣಿಯೇತರ ಆಸ್ತಿಯಿಂದ ವಸೂಲು ಮಾಡಲು ಅವರ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಹೂಡುವ ಪ್ರಸ್ತಾವನೆಗಳನ್ನು ಇತ್ಯರ್ಥಪಡಿಸತಕ್ಕದ್ದು. ಈಗಾಗಲೇ ಕಾಲಮಿತಿಯಿಂದ ಬಾಧಿತವಾಗಿರುತ್ತವೆ ಎಂದು ಪರಿಗಣಿಸಿದ ಪ್ರಸ್ತಾವನೆಗಳನ್ನು ಈ ಮೇಲಿನಂತೆ ಪುನರ್‌ಪರಿಶೀಲಿಸತಕ್ಕದ್ದು ಎಂದು ತಿಳಿಸಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...