ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, 15 ದಿನಗಳಲ್ಲಿ ನೋಟಿಫಿಕೇಷನ್ ಹೊರಡಿಸುವಂತೆ ಆದೇಶ ನೀಡಿದೆ.
BIG NEWS: ಡಿ.ಕೆ.ಶಿ ಜೈಲುಹಕ್ಕಿ; ಅವರ ಮಾತನ್ನು ಯಾರೂ ನಂಬಲ್ಲ; ಪರ್ಮನೆಂಟ್ ಆಗಿ ತಿಹಾರ್ ಜೈಲಿಗೆ ಹೋಗ್ತಾರೆ; ಸಚಿವ ಅಶ್ವತ್ಥನಾರಾಯಣ ಆಕ್ರೋಶ
ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದು, ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಪಾಲಿಕೆಯ 243 ವಾರ್ಡ್ ಗಳಿಗೆ ಅಲ್ಲ, ಈ ಬಾರಿಯೂ 198 ವಾರ್ಡ್ ಗಳಿಗೆ ಮಾತ್ರ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ ಎಂದರು.
ದೇಶಾದ್ಯಂತ ಕಾರ್ಪೊರೇಷನ್ ಎಲೆಕ್ಷನ್ ನಡೆಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಆದೇಶ ನೀಡಿದ್ದು, ಎರಡು ವಾರಗಳಲ್ಲಿ ಎಲೆಕ್ಷನ್ ಘೋಷಣೆ ಮಾಡಬೇಕು. ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ಬೂತ್ ಮಟ್ಟದಲ್ಲಿಯೇ ಚುನಾವಣೆಗೆ ಸಿದ್ಧತೆ ಮಾಡಿದ್ದೇವೆ. ಗೆಲ್ಲುವ ವಿಶ್ವಾಸವೂ ನಮಗಿದೆ ಎಂದು ಹೇಳಿದರು.