alex Certify BIG NEWS : ‘ಆಸ್ತಿ ಮಾಲೀಕ’ರೇ ಗಮನಿಸಿ : ಇ-ಖಾತಾ ಪಡೆಯುವುದು ಬಹಳ ಸುಲಭ, ಜಸ್ಟ್ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಆಸ್ತಿ ಮಾಲೀಕ’ರೇ ಗಮನಿಸಿ : ಇ-ಖಾತಾ ಪಡೆಯುವುದು ಬಹಳ ಸುಲಭ, ಜಸ್ಟ್ ಹೀಗೆ ಮಾಡಿ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ಮಾಡಿಸಲು ಹೊಸ ವೆಬ್ ಸೈಟ್ ಆರಂಭಿಸಲಾಗಿದ್ದು, ಖಾತೆ ಇಲ್ಲದವರೂ ಸಹ ಇ-ಖಾತಾ ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಖಾತಾ ಪಡೆಯೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು ಎನ್ನುವ ವಿವರ ಇಲ್ಲಿದೆ.

ಇ-ಖಾತಾ ಅಭಿಯಾನ

“ಇ-ಅಸ್ತಿ ಪಡೆಯಲು ಸರಳ ವಿಧಾನಗಳು”

  1. ಸರ್ಕಾರದಿಂದ ವಿತರಿಸಿದ ಯಾವುದೇ ಬಗೆಯ ಗುರುತಿನ ಚೀಟಿ.
  2. ಆಸ್ತಿ ಮಾಲಿಕರ ಫೋಟೊ.
  3. ಮಾಲಿಕತ್ವ ದೃಡಿಕರಿಸುವ ನೋಂದಾಯಿತ ದಾಖಲೆಗಳು
  4. ಸ್ವತ್ತಿನ ಋಣಭಾರ ಪ್ರಮಾಣ ಪತ್ರ
  5. ಸ್ವತ್ತಿನ ಛಾಯಾ ಚಿತ್ರ
  6. ಆಸ್ತಿ ತೆರಿಗೆ ಪಾವತಿಸಿದ ರಶೀದಿ

ಈ ಮೇಲಿನ ದಾಖಲೆಗಳೊಂದಿಗೆ ಸಂಭದಿಸಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ದಾಖಲೆಯನ್ನು ಪಡೆದುಕೊಳ್ಳಬಹುದು.

ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಆಸ್ತಿ ಖಾತೆಯನ್ನು ಪಡೆಯಿರಿ.

ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತಂತೆ ಸಂಶಯವಿದ್ದಲ್ಲಿ ಇ – ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...