ಬೆಂಗಳೂರು: ಟ್ರಾಫಿಕ್ ಎಎಸ್ಐ ಮೇಲೆ ಇನ್ಸ್ ಪೆಕ್ಟರ್ ದರ್ಪ ಮೆರೆದ ಘಟನೆ ಬೆಳಕಿಗೆ ಬಂದಿದೆ. ತಮ್ಮ ಕಡೆಯವರ ವಾಹನಕ್ಕೆ ದಂಡ ಕಟ್ಟಲು ಹೇಳಿದರು ಎಂದು ಗರಂ ಆದ ಏರ್ ಪೋರ್ಟ್ ಲಾ ಆಂಡ್ ಆರ್ಡರ್ ಇನ್ಸ್ ಪೆಕ್ಟರ್ ಮುತ್ತುರಾಜ್, ಟ್ರಾಫಿಕ್ ಎಎಸ್ಐ ವೆಂಕಟೇಶ್ ಅವರಿಗೆ ಕರೆ ಮಾಡಿ ದರ್ಪ ಮೆರೆದಿದ್ದಾರೆ.
ಹೆದ್ದಾರಿಯಲ್ಲಿ ಬರುತ್ತಿದ್ದ ಕಾರನ್ನು ತಡೆದಿದ್ದ ಸಂಚಾರಿ ಪೊಲೀಸರು ಕಾರಿನ ಮೇಲೆ 41,500 ರೂಪಾಯಿ ದಂಡ ವಿಧಿಸಿ, ದಂಡ ಕಟ್ಟಲು ಕಾರು ಮಾಲೀಕರಿಗೆ ಸೂಚಿಸಿದ್ದರು. ಕಾರು ಮಾಲೀಕ ಇನ್ಸ್ ಪೆಕ್ಟರ್ ಮುತ್ತುರಾಜ್ ಗೆ ಕರೆ ಮಾಡಿ ಕಾರನ್ನು ಬಿಡುವಂತೆ ಕೇಳಿದ್ದಾರೆ. ಮುತ್ತುರಾಜ್ ಎಎಸ್ಐ ವೆಂಕಟೇಶ್ ಗೆ ಸೂಚಿಸಿದ್ದಾರೆ. ಆದರೆ ಕಾನೂನು ಎಲ್ಲರಿಗೂ ಒಂದೆ ಕಾರು ಬಿಡಲು ಸಾಧ್ಯವಿಲ್ಲ ಎಂದು ಎಎಸ್ಐ ಹೇಳಿದ್ದಾರೆ. ಇನ್ಸ್ ಪೆಕ್ಟರ್ ಗರಂ ಆಗಿ ಬೈದಿದ್ದಾರೆ. ಎಎಸ್ಐ ಕಾರಿಗೆ 2000 ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ಬಳಿಕ ಎಎಸ್ಐ ವೆಂಕಟೇಶ್ ಗೆ ಕರೆ ಮಾಡಿದ ಇನ್ಸ್ ಪೆಕ್ಟರ್ ಮುತ್ತುರಾಜ್, ನಾನು ಯಾರೆಂದು ಗೊತ್ತಿಲ್ಲ. ತೋರಿಸ್ತೀನಿ ಎಂದು ಆವಾಜ್ ಹಾಕಿದ್ದಾರೆ. ಎ ಎಸ್ ಐಗೆ ಇನ್ಸ್ ಪೆಕ್ಟರ್ ಆವಾಜ್ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.