ವಿಜಯಪುರ: ಎಪಿಎಂಸಿ ಲೆಕ್ಕಪರಿಶೋಧಕರೊಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.
ಶಂಕರಯ್ಯ ಲೋಕಾಯುಕ್ತ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಲೆಕ್ಕಪರಿಶೋಧಕ. ಶಂಕರಯ್ಯ ವಿಜಯಪುರದ ಎಪಿಎಂಸಿ ಆಂತರಿಕ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವ್ಯಾಪಾರ ಮಾಡಲು ಟ್ರೇಡಿಂಗ್ ಲೈಸನ್ಸ್ ನೀಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶಂಕರಯ್ಯನನ್ನು ಬಂಧಿಸಿದ್ದಾರೆ. ದಾಳಿ ವೇಳೆ ಹೆಚ್ಚುವರಿಯಾಗಿ ಪತ್ತೆಯಾದ 39 ಸಾವಿರ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.