ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆಯ ಬೆನ್ನಲ್ಲೇ ಬೆಳ್ಳಿ ಕೂಡ ಜನಸಾಮಾನ್ಯರ ಕೈಗೆಟುಕದಂತಾಗಿದೆ. ಬೆಳ್ಳಿಯ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಗುರುವಾರದ ವಹಿವಾಟಿನಲ್ಲಿ ಬೆಳ್ಳಿಯ ದರದಲ್ಲಿ ಭಾರಿ ಏರಿಕೆ ಕಂಡು ಪ್ರತಿ ಕೆಜಿಗೆ 86,000 ರೂಪಾಯಿಗೆ ತಲುಪಿದೆ. ಮತ್ತೊಂದೆಡೆ ಕಳೆದ ವಾರ ಕೊಂಚ ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಸಹ ಹೆಚ್ಚಳವಾಗಿದೆ.
ಏಪ್ರಿಲ್ 19 ರಂದು ಚಿನ್ನದ ಬೆಲೆ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ 73,596 ರೂಪಾಯಿ ಆಗಿತ್ತು. ಕೆಲವು ದಿನಗಳಿಂದ ಬುಲಿಯನ್ ಮಾರುಕಟ್ಟೆಯಲ್ಲಿ ನಿರಂತರ ಏರಿಳಿತಗಳು ನಡೆಯುತ್ತಿವೆ. ಗುರುವಾರ, 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 542 ರೂಪಾಯಿಗಳಷ್ಟು ಏರಿಕೆಯಾಗಿ 73,476 ರೂಪಾಯಿಗಳಿಗೆ ತಲುಪಿದೆ.
23 ಕ್ಯಾರೆಟ್ ಚಿನ್ನದ ದರ 73,182 ರೂ., 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 67,304 ರೂಪಾಯಿ ಆಗಿದೆ. ಬೆಳ್ಳಿಯ ದರದಲ್ಲಿ ಸುಮಾರು 1,200 ರೂಪಾಯಿಗಳಷ್ಟು ಏರಿಕೆಯಾಗಿ 85,700 ರೂಪಾಯಿ ದಾಟಿದೆ.