ಬೆಂಗಳೂರು : 2025-26 ನೇ ಸಾಲಿಗೆ ‘ಶಿಕ್ಷಣ ಹಕ್ಕು’ ಕಾಯಿದೆಯಡಿ ಪ್ರವೇಶ ಪ್ರಕ್ರಿಯೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. 2025-26 ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1) (ಸಿ)ಅಡಿ ಪ್ರವೇಶ ಪ್ರಕ್ರಿಯೆಯ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಈಗಾಗಲೇ ಉಲ್ಲೇಖ(9)ರಂತೆ 2025-26ನೇ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲೆಗಳ ಮ್ಯಾಪಿಂಗ್ ಮಾಡುವ ಕುರಿತು ಕಳುಹಿಸಿರುವ ಸುತ್ತೋಲೆಯನ್ನು ಮುಂದುವರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಈ ಕೆಳಕಾಣಿಸಿದ ಕ್ರಮ ತೆಗೆದುಕೊಳ್ಳಲು ತಿಳಿಸಿದೆ.
1. ನೆರೆಹೊರೆಯಲ್ಲಿರುವ ಯಾವುದೇ ಶಾಲೆಯನ್ನು ಕೈಬಿಡದಂತೆ ಎಲ್ಲಾ ಸರ್ಕಾರಿ, ಬಿ.ಬಿ.ಎಂ.ಪಿ. ಶಾಲೆಗಳು ಅನುದಾನಿತ ಮತ್ತು ಅನುದಾನರಹಿತ, ಶಾಲೆಗಳನ್ನು ಮ್ಯಾಪ್ ಮಾಡುವುದು.
2. ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣಾ ಪತ್ರ ಪಡೆದಿರುವ, ಈಗಾಗಲೇ ಮುಚ್ಚಿರುವ ಮತ್ತುನ್ಯಾಯಾಲಯದ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡುವುದು.
3. ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಗಳನ್ನು ಮಾತ್ರ ನಡೆಸುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸಬಾರದು.
ಅಲ್ಪಸಂಖ್ಯಾತವಲ್ಲದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ದಿನಾಂಕ: 31.12.2024 ರಲ್ಲಿದ್ದಂತೆ ಎಲ್.ಕೆ.ಜಿ. ಮತ್ತು 1 ನೇ ತರಗತಿಯ ಮಾನ್ಯತೆ ಪಡೆದ ವಿಭಾಗಗಳಿಗೆ ಅನುಗುಣವಾಗಿ ದಾಖಲಾತಿ ಸಂಖ್ಯೆಯನ್ನು ಎಸ್.ಎ.ಟಿ.ಎಸ್. ತಂತ್ರಾಂಶದ ಆಧಾರದ ಮೇಲೆ ಶೇ.25% ಸೀಟು ಹಂಚಿಕೆಗೆ ಪರಿಗಣಿಸಲಾಗುವುದು.
2025-26ನೇ ಸಾಲಿನಲ್ಲಿ ಕಾಯ್ದೆಯ ಸೆಕ್ಷನ್ 12(1) (ಬಿ) ಮತ್ತು 12(1)(ಸಿ) ಅನ್ವಯ ಪ್ರವೇಶ ಪ್ರಕ್ರಿಯೆಗೆ ನಿಗಧಿಪಡಿಸಿದ ವೇಳಾಪಟ್ಟಿಯನ್ನು ಈ ಸುತ್ತೋಲೆಗೆ ಲಗತ್ತಿಸಿದೆ. ವೇಳಾಪಟ್ಟಿ ಪ್ರಕಾರ ಸಂಬಂಧಿಸಿದ ಪ್ರಾಧಿಕಾರ ಸಕಾಲಿಕ ಕ್ರಮ ತೆಗೆದುಕೊಳ್ಳುವುದು. ಆನ್ಲೈನ್ ತಂತ್ರಾಂಶದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಪ್ರತಿ ವರ್ಷದಂತೆ ಅಗತ್ಯ ಗಣಕಯಂತ್ರ ವ್ಯವಸ್ಥೆ ಮತ್ತು ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು.
ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಮೊದಲು ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇಲ್ಲದಿರುವುದನ್ನು มอส่ ಪಡಿಸಿಕೊಂಡು ನೆರೆಹೊರೆಯಲ್ಲಿರುವ ಅಲ್ಪಸಂಖ್ಯಾತವಲ್ಲದ ಅಧಿಕೃತ ಅನುದಾನ ರಹಿತ ಶಾಲೆಗಳ ಅಂತಿಮ ಪಟ್ಟಿ ಹಾಗೂ ಸದರಿ ಶಾಲೆಗಳಲ್ಲಿ ಮಾನ್ಯತೆ ಪಡೆದ ವಿಭಾಗಗಳಿಗೆ ಅನುಗುಣವಾಗಿ ಶಾಲಾವಾರು ಶೇಕಡಾ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅದರಂತೆ ಉಪನಿರ್ದೇಶಕರು(ಆಡಳಿತ)ರವರ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮವಹಿಸುವುದು.
ಅನುದಾನಿತ ಶಾಲೆಗಳಲ್ಲಿ ಅನುದಾನದ ಅನುಪಾತಕ್ಕೆ ಅನುಗುಣವಾಗಿ ಸೆಕ್ಷನ್ 12(1)(ಬಿ) ಅಡಿ 1ನೇ ತರಗತಿಗೆ ಶಾಲಾವಾರು ಮಾನ್ಯತೆ ಪಡೆದ ವಿಭಾಗಗಳಿಗೆ ಅನುಗುಣವಾಗಿ ಶೇಕಡಾ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳ ಮಾಹಿತಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅದರಂತೆ ತಮ್ಮ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮವಹಿಸುವುದು.ನೆರೆಹೊರೆ ಶಾಲೆಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಆಕ್ಷೇಪಣೆಗಳನ್ನು ಸ್ವೀಕರಿಸಿ, ದತ್ತಾಂಶ ಪರಿಶೀಲಿಸಿ, ನೈಜತೆಯನ್ನು ಖಾತರಿ ಪಡಿಸಿಕೊಂಡು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದು ಕ್ಷೇತ್ರಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಉಪನಿರ್ದೇಶಕರ ಕಛೇರಿಯಿಂದ ಈ ಕುರಿತು ಅನುಪಾಲನೆ ಮಾಡಲು ತಿಳಿಸಿದೆ.





