ಮೈಸೂರು: ಪಿ ಎಸ್ ಐ ಹುದ್ದೆಗಳ ಪರೀಕ್ಷೆಯಲ್ಲಿ ಹಣ ಲೂಟಿ ಮಾಡಿದ್ದಾರೆ. ಯುವಕರಿಂದ ಸರ್ಕಾರ 300 ಕೋಟಿ ಹಣ ಲೂಟಿ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಸರ್ಕಾರ ಲೂಟಿ ಮಾಡಿದೆ. ಅದರಲ್ಲಿ ಮಂತ್ರಿಗಳೂ ಇದ್ದಾರೆ. ಬಿಜೆಪಿಯವರೂ ಇದ್ದಾರೆ. ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಇದೆ. ಕೆಂಪಯ್ಯ ಮತ್ತೊಮ್ಮೆ ಪ್ರಧಾನಿ ಮೋದಿಯವರುಗೆ ಪತ್ರ ಬರೆದಿರಬೇಕು ಎಂದು ಹೇಳಿದರು.
ಇಂತಹ ಭ್ರಷ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿಯೇ ನೋಡಿರಲಿಲ್ಲ. ಎಡಿಜಿಪಿ ಕಚೇರಿಯಲ್ಲಿ ಪಿ ಎಸ್ ಐ ಪರೀಕ್ಷೆ ಉತ್ತರ ಬರೆದಿದ್ದಾರೆ. ಖಾಲಿ ಪೇಪರ್ ಪಡೆದು ನಂತರ ಉತ್ತರವನ್ನು ಬರೆದಿದ್ದಾರೆ. ಎಡಿಜಿಪಿಯಾಗಿದ್ದ ಅಮೃತ ಪೌಲ್ ಹೆಸರು ಮಾತ್ರ ಅಮೃತ ಆದರೆ ಆತ ಅಮೃತವಲ್ಲ ವಿಷಾಮೃತ ಎಂದು ಕಿಡಿಕಾರಿದ್ದಾರೆ.
ಅಲ್ಪಸಂಖ್ಯಾತರಿಗೆ ನೋವುಂಟು ಮಾಡಲೆಂದೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ ಎಂದು ಹೇಳಿದರು.