ಈ ಬಾರಿ ರಾಜ್ಯದಲ್ಲಿ ವರುಣ ಆರ್ಭಟಿಸಿದ್ದು, ಇನ್ನೂ ಕೂಡ ಅದು ಮುಂದುವರೆದಿದೆ. ವ್ಯಾಪಕ ಮಳೆಯಾಗಿರುವ ಕಾರಣ ಹಳ್ಳಕೊಳ್ಳಗಳು, ಕೆರೆಕಟ್ಟೆಗಳು, ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ.
ಮುಂದಿನ ಮೂರ್ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಇದರ ಮಧ್ಯೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ ಬರೊಬ್ಬರಿ 89 ವರ್ಷಗಳ ಬಳಿಕ ಭರ್ತಿಯಾಗಿದೆ.
1933ರ ಸೆಪ್ಟೆಂಬರ್ 2ರಂದು ಮೊದಲ ಬಾರಿಗೆ ಈ ಜಲಾಶಯ ಭರ್ತಿಯಾಗಿದ್ದು, ಕಾಕತಾಳೀಯ ಎಂಬಂತೆ 89 ವರ್ಷ ಬಳಿಕ ಸೆಪ್ಟೆಂಬರ್ 2 ರಂದೇ ಮತ್ತೆ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಇದನ್ನು ವೀಕ್ಷಿಸಲು ಶುಕ್ರವಾರದಂದು ತಂಡೋಪತಂಡವಾಗಿ ಆಗಮಿಸಿದ್ದ ಜನ, ಜಲಾಶಯಕ್ಕೆ ಕೋಡಿ ಬಿದ್ದು ನೀರು ಹೊರ ಹರಿಯುತ್ತಿದ್ದಂತೆ ಹರ್ಷೋದ್ಗಾರ ಮಾಡಿದ್ದಾರೆ.