alex Certify BIG NEWS: 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್​ ಪಡೆಯಲು ಬೇಕಿಲ್ಲ ಕೊಮಿರ್ಬಿಡಿಟಿ ದಾಖಲೆ; ಕೇಂದ್ರದಿಂದ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್​ ಪಡೆಯಲು ಬೇಕಿಲ್ಲ ಕೊಮಿರ್ಬಿಡಿಟಿ ದಾಖಲೆ; ಕೇಂದ್ರದಿಂದ ಮಹತ್ವದ ಘೋಷಣೆ

ಕೋವಿಡ್​ 19 ಲಸಿಕೆಯ ಬೂಸ್ಟರ್​ ಡೋಸ್​ ಸ್ವೀಕರಿಸಲು 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೊಮಿರ್ಬಿಡಿಟಿ ದಾಖಲೆಯನ್ನು ಸಲ್ಲಿಸಬೇಕು ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ನಿಯಮವನ್ನು ಬದಲಾಯಿಸಿದೆ.

ಕೋವಿಡ್​ 19 ಸೋಂಕಿನ ಅಪಾಯ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚಾಗಿ ಇರುವುದರಿಂದ ಈ ವರ್ಗದವರು ಬೂಸ್ಟರ್​ ಡೋಸ್​ ಪಡೆಯಲು ವೈದ್ಯರ ಪ್ರಮಾಣ ಪತ್ರವನ್ನು ಪ್ರಸ್ತುತ ಪಡಿಸುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಜನವರಿ 10ನೇ ತಾರೀಖಿನಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಕೊಮಿರ್ಬಿಡಿಟಿ ಹೊಂದಿರುವ ಹಿರಿಯ ನಾಗರಿಕರು ಕೋವಿಡ್​ 19 ಲಸಿಕೆಯ ಬೂಸ್ಟರ್ ಡೋಸ್​ನ್ನು ಪಡೆಯಬಹುದಾಗಿದೆ.

60 ವರ್ಷ ಮೇಲ್ಪಟ್ಟ ರಕ್ತದೊತ್ತಡ, ಮಧುಮೇಹ, ಕಿಡ್ನಿ , ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವ ಹಿರಿಯ ನಾಗರಿಕರು ಕೊಮಿರ್ಬಿಡಿಟಿ ವಿಭಾಗಕ್ಕೆ ಸೇರುತ್ತಾರೆ. ಈ ಮೊದಲು ಈ ರೀತಿ ಸಮಸ್ಯೆ ಇರುವವರು ಸಂಬಂಧಪಟ್ಟ ವೈದ್ಯರಿಂದ ಬೂಸ್ಟರ್​ ಡೋಸ್​ಗೆ ಶಿಫಾರಸು ಪ್ರಮಾಣ ಪತ್ರವನ್ನು ತರಬೇಕು ಎಂದು ನಿಯಮ ರೂಪಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...