ಕಲಬುರ್ಗಿ: 545 ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಅಭ್ಯರ್ಥಿ ಸುನೀಲ್ ಕುಮಾರ್ ಎಂದು ತಿಳಿದು ಬಂದಿದೆ. ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಸಿಐಡಿ ಪೊಲೀಸರು ಕಲಬುರ್ಗಿಗೆ ಕರೆದೊಯ್ದಿದ್ದಾರೆ.
ಇಲ್ಲಿದೆ ʼರಾಕಿಂಗ್ ಸ್ಟಾರ್ʼ ಯಶ್ ಕುರಿತ ಇಂಟ್ರಸ್ಟಿಂಗ್ ಮಾಹಿತಿ
ಆರೋಪಿ ಸುನೀಲ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪಿ ಎಸ್ ಐ ಪರೀಕ್ಷೆ ಬರೆದಿದ್ದ. ಸಿಐಡಿ ಅಧಿಕಾರಿಗಳು ಸುನೀಲ್ ಕುಮಾರ್ ನನ್ನು ದಾಖಲೆ ಪರಿಶೀಲನೆಗಾಗಿ ಕರೆದಿದ್ದರು. ಈ ವೇಳೆ ಆತ ಅಕ್ರಮವೆಸಗಿರಿವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.