![](https://kannadadunia.com/wp-content/uploads/2022/10/Vidhanasaudha.jpg)
ಬೆಂಗಳೂರು : ರಾಜ್ಯದಲ್ಲಿ ಇನ್ನೂ 500 ಪಬ್ಲಿಕ್ ಶಾಲೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ.
ರಾಜ್ಯದಲ್ಲಿ ಎರಡು ಸಾವಿರ ಕರ್ನಾಟಕ ಪಬ್ಲಿಕ್ ಶಾಳೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಯೋಜಿಸಿದ್ದು, ಮೊದಲ ಹಂತದಲ್ಲಿ ಕಾರ್ಪೋರೆಟ್ ಸಮಾಜಿಕ ಜವಾಬ್ದಾರಿ, ಸಾಮಾಜಿಕ ಸಂಸ್ಥೆಗಳ ಸಹಕಾರದೊಂದಿಗೆ 500 ಕೆಪಿಎಸ್ ಗಳನ್ನು ಪ್ರಾರಂಭಿಸಲು ಸಮಿತಿ ರಚಿಸಲಾಗಿದೆ.
ಪಬ್ಲಿಕ್ ಶಾಲೆಗಳ ಆರಂಭದ ಕುರಿತಂತೆ ವಿವಿಧ ಇಲಾಖೆಗಳ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಸೇರಿದಂತೆ 18 ಮಂದಿ ಸದಸ್ಯರು ಇರಲಿದ್ದು, ಮೇಲುಸ್ತುವಾರಿ ಸಮಿತಿ ಜೊತೆಗೆ ಕೆಪಿಎಸ್ ಕಾರ್ಯಕಾರಿ ಸಮಿತಿಯನ್ನೂ ರಾಜ್ಯ ಸರ್ಕಾರ ರಚಿಸಿದೆ.